ಆನೆಹೊಸೂರು ಸಮುದಾಯ ಆರೋಗ್ಯ ಕೇಂದ್ರ| ವೈದ್ಯರ ಕೊರತೆ: ರೋಗಿಗಳ ಪರದಾಟ
ಶರಣಪ್ಪ ಆನೆಹೊಸೂರು
Published : 8 ಜೂನ್ 2025, 6:24 IST
Last Updated : 8 ಜೂನ್ 2025, 6:24 IST
ಫಾಲೋ ಮಾಡಿ
Comments
ಆನೆಹೊಸೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರನ್ನು ನೇಮಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕು
ಮೈಬೂಬ್ ಗ್ರಾಮಸ್ಥ
ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಕೊರತೆ ಇದೆ. ತಜ್ಞ ವೈದ್ಯರನ್ನು ನೀಡಿ ಎಂದು ಇಲಾಖೆ ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಿದ್ದೇವೆ
ಡಾ.ಸುರೇಂದ್ರಬಾಬು ಡಿಎಚ್‌ಒ ರಾಯಚೂರು
ಸ್ವಚ್ಛತೆ ಮರೀಚಿಕೆ
ಆರೋಗ್ಯ ಕೇಂದ್ರದ ಹಿಂಭಾಗ ಸ್ವಚ್ಛತೆ ಇಲ್ಲ. ಮುಳ್ಳು–ಗಿಡಗಳು ಬೆಳೆದು ನಿಂತಿವೆ. ವಸತಿ ಗೃಹಗಳ ಕೆಲ ಕೊಠಡಿಗಳು ದುರಸ್ತಿ ಕಂಡಿಲ್ಲ. ಹಾಳು ಬಿದ್ದಿವೆ. 30 ಸಾವಿರಕ್ಕೂ ಹೆಚ್ಚು ಜನರು ಉಪಯೋಗ ಪಡೆದುಕೊಳ್ಳುವ ಆರೋಗ್ಯ ಕೇಂದ್ರಕ್ಕೆ ಅರಿವಳಿಕೆ ತಜ್ಞರು ಮಕ್ಕಳ ತಜ್ಞರ ಇಲ್ಲದಂತಾಗಿದೆ. ತಜ್ಞ ವೈದ್ಯರು ಇಲ್ಲದ ಕಾರಣ ಆರೋಗ್ಯ ಕೇಂದ್ರ ಪ್ರಯೋಜನಕ್ಕೆ ಬಾರದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.