ರಾಯಚೂರು: ಕೋವಿಡ್ ಕರ್ತವ್ಯದಲ್ಲಿದ್ದ ಎಲ್ಲರಿಗೂ ಪಿ.ಪಿ.ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಜರ್ ಒದಗಿಸಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು ಸಂಯೋಜಿತ) ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಇಡೀ ಕುಟುಂಬಕ್ಕೆ ಉಚಿತ ಚಿಕಿತ್ಸೆ ನೀಡಬೇಕು. ಅಮ್ಲಜನಕ, ಅಗತ್ಯ ಔಷಧಿಗಳು ಮತ್ತು ಆಸ್ಪತ್ರೆಯಲ್ಲಿ ಹಾಸಿಗೆಗಳು ಇಲ್ಲದೇ ಜನರು ಸಾಯುತ್ತಿರುವ ಆರೋಗ್ಯ ಬಿಕ್ಕಟ್ಟಿಗೆ ನಾವು ಬಲಿಯಾಗಿದ್ದೇವೆ. ಎಲ್ಲರಿಗೂ ₹50 ಲಕ್ಷ ಜೀವವಿಮೆ ಸೌಲಭ್ಯ ಕಲ್ಪಿಸಬೇಕು ಹಾಗೂ ಸೊಂಕಿತರಿಗೆ ₹10 ಲಕ್ಷ ಪರಿಹಾರ ಕೊಡಬೇಕು. ಮಾಸಿಕ ₹10 ಸಾವಿರ ರಿಸ್ಕ್-ಭತ್ಯೆ ಮತ್ತು ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಐ.ಸಿ.ಡಿ.ಎಸ್. ಫಲಾನುಭವಿಗಳಿಗೆ ನೀಡುವ ಪೌಷ್ಟಿಕ ಅಂಶಗಳನ್ನು ದ್ವಿಗುಣಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಂದ ನ್ಯೂಟ್ರಿ-ಗಾರ್ಡನ್, ಬೇಡ ಬಾಕಿ ಇರುವ ಎಲ್ಲಾ ವೇತನ ಮತ್ತು ಭತ್ಯೆಗಳ ಪಾವತಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಎಚ್.ಪದ್ಮಾ, ಪದಾಧಿಕಾರಿಗಳಾದ ಪಾರ್ವತಿ, ಗೋಕರಮ್ಮ, ರಾಜಶ್ರೀ, ಶರಣಮ್ಮ, ಭಾಗ್ಯಮ್ಮ, ಪಾರ್ವತಿ, ರಹೇಮತ್, ಶಾಂತಾ, ನಾಗಮ್ಮ ಗಧಾರ, ಆಸ್ಮಾ, ಶಾರದಮ್ಮ, ವೆಂಕಟಮ್ಮ, ನರ್ಮದಾ, ಶರಣಬಸವ ಡಿ.ಎಸ್, ವರಲಕ್ಷಿö್ಮÃ, ಭಾಗ್ಯಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.