ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ| ಪ್ರಚೋಧನೆಯಿಂದ ಹಲ್ಲೆ ನಡೆದಿದೆ: ಪ್ರತಾಪಗೌಡ

Published 11 ಮೇ 2023, 14:06 IST
Last Updated 11 ಮೇ 2023, 14:06 IST
ಅಕ್ಷರ ಗಾತ್ರ

ಮಸ್ಕಿ: ಹಾಲಿ ಶಾಸಕ ಆರ್. ಬಸನಗೌಡರ ಸಹೋದರ ಆರ್. ಸಿದ್ದನಗೌಡ ಅವರು ಬಿಜೆಪಿ ಕಾರ್ಯಕರ್ತರ ಬಗ್ಗೆ ಪ್ರಚೋಧನಕಾರಿ ಮಾತನಾಡಿದ್ದರಿಂದ ಅವರ ಮೇಲೆ ಹಲ್ಲೆ ನಡೆದಿದೆ, ಈ ಘಟನೆ ನಡೆಯಬಾರದಿತ್ತು. ಇದಕ್ಕೆ ನಾನು ಪಕ್ಷಾತೀತವಾಗಿ ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಗುರುವಾರ ಘಟನೆ ಕುರಿತು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮತದಾನಕ್ಕಿಂತ ಮುನ್ನಾದಿನ ರಾತ್ರಿ ನನ್ನ ಆಪ್ತ ಸಹಾಯಕ ವೀರೇಶ ಬಳಿಗಾರ, ಪಕ್ಷೇತರ ಅಭ್ಯರ್ಥಿಯಾಗಿದ್ದ ಸೋಮನಗೌಡ ನಾಯಕ ಸೇರಿದಂತೆ ಹಲವರ ಮೇಲೆ ಆರ್. ಸಿದ್ದನಗೌಡ ತಮ್ಮ ಕಾರ್ಯಕರ್ತರಿಂದ ಹಲ್ಲೆ ನಡೆಸಿದ್ದಾರೆ.

ಮರುದಿನ ಮತದಾನ ಇದ್ದ ಕಾರಣ ಪೊಲೀಸರು ಸಂಜೆ ದೂರು ನೀಡಿ ಎಂದಿದ್ದಕ್ಕೆ ದೂರು ನೀಡಲಿಲ್ಲ ಎಂದರು.

ಮತದಾನ ಮುಗಿದ ನಂತರ ಗಚ್ಚಿನಮಠದ ಮುಂದೆ ಹಿಂಬಾಲಕರೊಂದಿಗೆ ಬಂದ್ ಆರ್. ಸಿದ್ದನಗೌಡ ಬಿಜೆಪಿ ಕಾರ್ಯಕರ್ತರಿಗೆ ಪ್ರಚೋಧನಕಾರಿ ಮಾತನಾಡಿದ್ದರಿಂದ ಹಲ್ಲೆ ನಡೆಸಿದ್ದಾರೆ ಎಂದರು,

ಈ ಬಗ್ಗೆ ಪೊಲೀಸರಿಗೆ ದೂರು ನೀಡಲಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ ಎಂದರು. ಚುನಾವಣೆ ಗಲಾಟೆಯಾಗಿದ್ದರಿಂದ ಈ ಪ್ರಕರಣ ಇಲ್ಲಿಗೆ ನಿಲ್ಲುವಂತಾಗಲಿ, ನನ್ನ 12 ವರ್ಷದ ಅಧಿಕಾರದಲ್ಲಿ ಒಂದೇ ಒಂದು ಗಲಾಟೆ ಇರಲಿಲ್ಲ, ಇತ್ತೀಚೆಗೆ ಗಲಾಟೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂದರು. ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು.

ಮೂರು ಮೊಲೈಲ್ ನಂಬರ್ ಗಳಿಂದ ನನಗೆ ಜೀವ ಬೇಧರಿಕೆ ಕರೆಗಳು ಬರುತ್ತಿದ್ದು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದರು.

ಮುಖಂಡ ಶೇಖರಪ್ಪ ಮೇಟಿ, ಸಿದ್ದಣ್ಣ ಹೂವಿನಭಾವಿ, ಬಸವಂತರಾಯ ಕುರಿ, ವಕೀಲರಾದ ಈಶಪ್ಪ ದೇಶಾಯಿ, ಹರಿಶ್ಚಂದ್ರ ರಾಠೋಡ, ಬಸವರಾಜ ಡೊಣಮರಡಿ, ಅಮರೇಶ ನಾಯ್, ಚಂದ್ರಕಾಂತ ಗೊಗೆಬಾಳ, ಡಾ. ನಾಗನಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT