‘ತಾರತಮ್ಯ ನಿವಾರಣೆಗೆ ಪ್ರತ್ಯೇಕ ರಾಜ್ಯ ಪರಿಹಾರವಲ್ಲ’

7

‘ತಾರತಮ್ಯ ನಿವಾರಣೆಗೆ ಪ್ರತ್ಯೇಕ ರಾಜ್ಯ ಪರಿಹಾರವಲ್ಲ’

Published:
Updated:

ರಾಯಚೂರು: ‘ಅಖಂಡ ಕರ್ನಾಟಕದಲ್ಲಿ ಯಾವುದೇ ಒಡಕಿಲ್ಲ. ಆದರೆ, ತಾರತಮ್ಯ ಇದೆ. ಇದನ್ನು ಒಪ್ಪಿಕೊಳ್ಳಬೇಕು. ತಾರತಮ್ಯ ನಿವಾರಣೆಗೆ ಪ್ರತ್ಯೇಕ ರಾಜ್ಯ ಪರಿಹಾರವಲ್ಲ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ 
ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಪ್ರಾದೇಶಿಕ ಪ್ರಜ್ಞೆ ಇರುವ ಪ್ರಾದೇಶಿಕ ಪಕ್ಷ ಒಂದೂ ಇಲ್ಲ. ಮಿಥ್ಯಗಳನ್ನು ಸತ್ಯ ಎಂದು ಹೇಳಲಾಗುತ್ತಿದೆ. ರಾಜ್ಯದ ಸ್ವಾಯತ್ತತೆ ಬಗ್ಗೆ ಒಂದೂ ಪಕ್ಷ ಧ್ವನಿಯೆತ್ತಿಲ್ಲ. ಪ್ರತ್ಯೇಕ ರಾಜ್ಯ ಮಾಡಿಕೊಂಡಿರುವ ತೆಲಂಗಾಣ ಹಾಗೂ ಛತ್ತೀಸ್‌ಗಡ ರಾಜ್ಯದ ಜನರು ಸುಖವಾಗಿಲ್ಲ’ ಎಂದರು.

‘ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಪೂರ್ಣ ಪ್ರಮಾಣದ ಸಚಿವಾಲಯ ಸ್ಥಾಪಿಸಬೇಕು.ವಿಧಾನಸೌಧದಿಂದ ಅಧಿಕಾರ ವಿಕೇಂದ್ರಿಕರಣಗೊಂಡು ಜನರಿಗೆ ತಲುಪಬೇಕು. ಈ ತರಹದ ಸೌಹಾರ್ದ ಕರ್ನಾಟಕ ನಿರ್ಮಾಣ ಮಾಡಬೇಕು. ಇಲ್ಲಿಯವರೆಗೆ ಏನಾಗಿದೆ ಎಂಬುದರ ಬಗ್ಗೆ ಸಮೀಕ್ಷೆ ಮಾಡಬೇಕು’ ಎಂದರು.

‘ಕರ್ನಾಟಕ ಏಕೀಕರಣ ಹೋರಾಟದಲ್ಲಿ ಉತ್ತರ ಕರ್ನಾಟಕದವರ ಪಾಲು ಹೆಚ್ಚಾಗಿದೆ. ಏಕೀಕರಣದ ಹೋರಾಟವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !