ಕವಿತಾಳ: ಸತತ ಮಳೆಯಿಂದ ಸಮೀಪದ ಮಲ್ಲದಗುಡ್ಡ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಸೋರುತ್ತಿವೆ. ತಲೆ ಮೇಲೆ ಮಳೆ ನೀರು ತೊಟ್ಟಿಕ್ಕುವ ಕಾರಣ ಮಕ್ಕಳಿಗೆ ಪಾಠದ ಕಡೆ ಗಮನ ಹರಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.

1 ರಿಂದ 8ನೇ ತರಗತಿಯ ಅಂದಾಜು 375 ಮಕ್ಕಳು ಕಲಿಯುತ್ತಿದ್ದಾರೆ, 8 ಕೊಠಡಿಗಳಲ್ಲಿ ಎರಡು ಕೊಠಡಿಗಳು ಹೆಚ್ಚಿನ ಪ್ರಮಾಣದಲ್ಲಿ ಸೋರುತ್ತಿವೆ.

ಕೊಠಡಿಗಳ ಕೊರತೆಯಿಂದ 1,2 ಮತ್ತು 3ನೇ ತರಗತಿಯ ಇಂಗ್ಲೀಷ್ ಮಾಧ್ಯಮದ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂಡಿಸಿ ಪಾಠ ಮಾಡಲಾಗುತ್ತಿದೆ. 8ನೇ ತರಗತಿ ಮಕ್ಕಳನ್ನು ಇಲ್ಲಿನ ಪ್ರೌಢಶಾಲೆಗೆ ಸ್ಥಳಾಂತರಿಸಲಾಗಿದೆ, ಹೊಸದಾಗಿ ನಾಲ್ಕು ಕೊಠಡಿಗಳು ನಿರ್ಮಾಣವಾಗುತ್ತಿದ್ದು ಅದಕ್ಕೆ ಅಗತ್ಯವಾದ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಒಂದು ಕೊಠಡಿಯಲ್ಲಿ ಸಂಗ್ರಹ ಮಾಡಲಾಗಿದೆ.

‘2002ರಲ್ಲಿ ನಿರ್ಮಿಸಿದ ಶಾಲಾ ಕೊಠಡಿಗಳ ಬಹುತೇಕ ಗೋಡೆಗಳು ಬಿರುಕು ಬಿಟ್ಟಿವೆ ಮತ್ತು ಛಾವಣಿ ಸೋರುತ್ತಿದೆ ಹೊಸದಾಗಿ ನಿರ್ಮಿಸುತ್ತಿರುವ ನಾಲ್ಕು ಕೊಠಡಿಗಳು ಪೂರ್ಣಗೊಂಡರೆ ಸಹಾಯವಾಗುತ್ತದೆ, ಈ ಬ್ಗಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದು ಪ್ರಭಾರ ಮುಖ್ಯ ಶಿಕ್ಷಕ ಗುರುಬಸ್ಸಯ್ಯ ಹೇಳಿದರು.

ಸೋರುತ್ತಿರುವ ಚಾವಣಿ ದುರಸ್ತಿ ಮಾಡಬೇಕು ಕುಡಿಯುವ ನೀರಿನ ಫಿಲ್ಟರ್ ಕೆಟ್ಟಿದ್ದು ಅದನ್ನು ದುರಸ್ತಿ ಮಾಡಿದರೆ ಅನುಕೂಲವಾಗುತ್ತದೆ
ಯಲ್ಲಪ್ಪ ಮಲ್ಲದಗುಡ್ಡ ಸ್ಥಳೀಯ

ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮೇಲ್ದರ್ಜೆಗೇರಲಿದೆ ಆಗ ಹೊಸ ಕೊಠಡಿಗಳು ಮಂಜೂರಾದರೆ ಕೊಠಡಿಗಳ ಕೊರತೆ ಇರುವುದಿಲ್ಲ ಸಧ್ಯ ಮಳೆ ಬಂದರೆ ತೊಂದರೆಯಾಗುತ್ತಿದೆ
ಗುರುಬಸ್ಸಯ್ಯ ಪ್ರಭಾರ ಮುಖ್ಯಶಿಕ್ಷಕ ಮಲ್ಲದಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.