ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಂಡಲ್‌ ಇಲ್ಲದೇ 860 ಕಿಮೀ ಬೈಕ್ ಸವಾರಿ!

Published 29 ಡಿಸೆಂಬರ್ 2023, 12:01 IST
Last Updated 29 ಡಿಸೆಂಬರ್ 2023, 12:01 IST
ಅಕ್ಷರ ಗಾತ್ರ

ಮಸ್ಕಿ: ಕರ್ನಾಟಕ ಸುವರ್ಣ ಸಂಭ್ರಮದ ನಿಮಿತ್ತ ಕನ್ನಡಾಭಿಮಾನಿ ಯುವಕನೊರ್ವ 860 ಕಿಮೀ ಬೈಕ್ ಅನ್ನು ಹ್ಯಾಂಡಲ್‌ ಇಲ್ಲದೇ ಸವಾರಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಇಲಕಲ್ ಪಟ್ಟಣದ ನಿವಾಸಿ ವೀರಯ್ಯ ಸ್ವಾಮಿ ಎಂಬ ಯುವಕ ಕಲಬುರಗಿಯಿಂದ ಬೆಂಗಳೂರು ವರೆಗೆ ಬೈಕ್ ಸವಾರಿ ಮೂಲಕ ದಾರಿಯಲ್ಲಿ ಬರುವ ಪಟ್ಟಣ ಹಾಗೂ ಗ್ರಾಮಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ.

ಗುರುವಾರ ರಾತ್ರಿ ಪಟ್ಟಣಕ್ಕೆ ಸ್ಟೆರಿಂಗ್ ಇಲ್ಲದೇ ಬೈಕ್ ಚಲಾಯಿಸಿಕೊಂಡು ಪಟ್ಟಣದ ಅಶೋಕ ವೃತ್ತಕ್ಕೆ ಆಗಮಿದ ಸಂದರ್ಭದಲ್ಲಿ ವಿವಿಧ ಕನ್ನಡಪರ ಸಂಘಟನೆಳು ಹೂಮಾಲೆ ಹಾಕಿ ಬರಮಾಡಿಕೊಂಡರು.

ನಂತರ ಗಚ್ಚಿನಮಠದಲ್ಲಿ ಶನಿವಾರ ಬೆಳಿಗ್ಗೆ ವರರುದ್ರಮುನಿ ಸ್ವಾಮೀಜಿ ಸೇರಿದಂತೆ ಹಲವಾರು ಸಾಹಿತಿಗಳು ಯುವನನ್ನು ಸನ್ಮಾನಿಸಿ ಮುಂದಿನ ಪ್ರಯಾಣಕ್ಕೆ ಶುಭ ಕೋರಿದರು. ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಘನಮಠದಯ್ಯ ಸಾಲಿಮಠ, ಆದಯ್ಯಸ್ವಾಮಿ ಕ್ಯಾತನಟ್ಟಿ, ಶಿವಕುಮಾರ ಶಾಸ್ತ್ರಿ, ಮಹೇಶ ಕೊಟ್ಟೂರುಮಠ, ಬಸವರಾಜ ಸ್ವಾಮಿ ಹಸಮಕಲ್ ಸೇರಿದಂತೆ ಇತರರು ಇದ್ದರು.

’ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಉದ್ದೇಶ. ಸ್ಟೆರಿಂಗ್ ಸಹಾಯ ಇಲ್ಲದೆ ಬೈಕ್ ಓಡಿಸುವ ರೂಢಿ ಮಾಡಿಕೊಂಡಿರುವ ನಾನು ಈಗ ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಈ ಜಾಥಾ ಕೈಗೊಂಡಿದ್ದೇನೆ’ ಎಂದು ವೀರಯ್ಯಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT