ಶನಿವಾರ, ಸೆಪ್ಟೆಂಬರ್ 18, 2021
30 °C
ಸಸಿ ವಿತರಣೆ, ವನಸಿರಿ ಆಡಿಯೊ ಬಿಡುಗಡೆ, ರಕ್ತದಾನ ಶಿಬಿರ

ಸಿಂಧನೂರು: ‘ಅಮರೇಗೌಡರ ಪರಿಸರ ಕಾಳಜಿ ಅನುಕರಣೀಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ‘ನಾಲ್ಕೈದು ವರ್ಷಗಳಲ್ಲಿ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು 30 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುತ್ತಿರುವ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರ ಪರಿಸರ ಕಾಳಜಿ ಅನುಕರಣೀಯ’ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ರೌಡಕುಂದಾ ಗ್ರಾಮದ ಲಕ್ಷ್ಮಿಬಂಡೆರಂಗನಾಥ ದೇವಸ್ಥಾನದ ಆವರಣದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ನೇತೃತ್ವದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರ, 500 ಸಸಿ ವಿತರಣೆ, ವನಸಿರಿ ಆಡಿಯೋ ಬಿಡುಗಡೆ ಹಾಗೂ ಜೀವರಕ್ಷಕ ಸೇವಾ ಟ್ರಸ್ಟ್ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸದಾ ಪರಿಸರ ಸಂರಕ್ಷಣೆಯಲ್ಲಿ ತೊಡಗಿರುವ ಅಮರೇಗೌಡ ಅನೇಕ ಯುವಕರಿಗೆ ಮಾದರಿಯಾಗಿದ್ದಾರೆ. ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದರೆ ಒಂದಲ್ಲ ಒಂದು ದಿನ ತಕ್ಕ ಪ್ರತಿಫಲ ಸಿಗುತ್ತದೆ. ಯುವಕರು ಸಾಮಾಜಿಕ ಕಾರ್ಯಗಳ ಜತೆಗೆ ಕ್ರೀಡಾಸಕ್ತಿ ಬೆಳೆಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು’ ಎಂದರು.

ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಮರಿಬಸನಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಅಮರೇಗೌಡ ವಕೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಈರೇಶ ಇಲ್ಲೂರು, ರೌಡಕುಂದಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಾಂತೇಶ ಹಿರೇಗೌಡರ್ ಹಾಗೂ ಜಗದೀಶ ವಕೀಲ ಇದ್ದರು.

ಅಮರೇಗೌಡ ಮಲ್ಲಾಪುರ ಅವರನ್ನು ರಾಜಕೀಯ ಪಕ್ಷಗಳ ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಸನ್ಮಾನಿಸಿದರು.

ರೌಡಕುಂದಾ ಹಿರೇಮಠ ಸಂಸ್ಥಾನದ ಶಿವಯೋಗಿ ದೇವರು ಸಾನ್ನಿಧ್ಯ ವಹಿಸಿದ್ದರು.

ಮುಖಂಡರಾದ ರಂಗನಗೌಡ ಗೊರೇಬಾಳ, ಸೋಮನಗೌಡ ಬಾದರ್ಲಿ, ಸರ್ವೋತ್ತಮರೆಡ್ಡಿ, ಬಸವರಾಜ ಹಿರೇಗೌಡರ್, ಮಲ್ಲನಗೌಡ ಕಾನಿಹಾಳ, ಡಿ.ಎಚ್.ಕಂಬಳಿ, ವೈ.ನರೇಂದ್ರನಾಥ, ಕೆ.ಭೀಮನಗೌಡ, ವೀರೇಶ ಅಗ್ನಿ, ದ್ರಾಕ್ಷಾಯಿಣಿ ಬಸನಗೌಡ, ಶಿವರಾಜ ಪಾಟೀಲ ಗುಂಜಳ್ಳಿ, ಉಮೇಶ ಉಪ್ಪಾರ, ಹನುಮಂತಪ್ಪ ಪನ್ನೂರು ಇದ್ದರು.

ಶಿಕ್ಷಕ ಕೊಟ್ರೇಶ.ಬಿ ಹಾಗೂ ಭಾರತಿ ತಿವಾರಿ ನಿರೂಪಿಸಿದರು. ರಕ್ತದಾನ ಶಿಬಿರದಲ್ಲಿ 33 ಯುವಕರು ರಕ್ತದಾನ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.