ಲಿಂಗಸುಗೂರು: ‘ಬೆಂಗಳೂರು ಮೂಲದ ನಗು ಪೌಂಡೇಷನ್ ಸಂಸ್ಥೆ ತಾಲ್ಲೂಕಿನ 28 ಪ್ರಾಥಮಿಕ ಶಾಲೆಗಳಿಗೆ ಪೂರೈಸಿದ ಅಂದಾಜು ₹16 ಸಾವಿರ ಮೌಲ್ಯದ ಪುಸ್ತಕಗಳು ಮಕ್ಕಳ ಸ್ಪರ್ಧಾತ್ಮಕತೆಗೆ ಹೆಚ್ಚು ಪ್ರಯೋಜನ ಆಗಲಿವೆ’ ಎಂದು ಶಿಕ್ಷಣ ಸಂಯೋಜಕ ಬಸವರಾಜ ಮುಸ್ಲಿ ಹೇಳಿದರು.

ಬುಧವಾರ ರೋಡಲಬಂಡ(ಯುಕೆಪಿ) ಕ್ಲಸ್ಟರ್ ಮುಖ್ಯ ಶಿಕ್ಷಕರ ಸಭೆಯಲ್ಲಿ ಪುಸ್ತಕ ಸ್ವೀಕರಿಸಿ ಮಾತನಾಡಿ, ‘ಪುಸ್ತಕ ಸ್ವೀಕರಿಸಿದ ಮುಖ್ಯ ಶಿಕ್ಷಕರು ಗ್ರಂಥಾಲಯದಲ್ಲಿ ಪುಸ್ತಕ ನೋಂದಣಿ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಹತೆ ಹೊಂದಿದ ಮಕ್ಕಳಿಗೆ ನೀಡುವ ಜೊತೆಗೆ ಜ್ಞಾನಾರ್ಜನೆಗೆ ಆಸಕ್ತಿ ವಹಿಸಬೇಕು’ ಎಂದು ಸಲಹೆ ನೀಡಿದರು.

ಬೆಂಡೋಣಿ ಶಾಲಾ ಶಿಕ್ಷಕ ನಗು ಪೌಂಡೇಷನ್ ಸಂಸ್ಥೆ ಪುಸ್ತಕ ನೀಡಿ ಮಾತನಾಡಿ, ‘ನವೋದಯ, ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ ಸೇರಿದಂತೆ ಇತರೆ ಶಾಲೆಗಳ ಪ್ರವೇಶ ಪರೀಕ್ಷೆ ಬರೆಯುವ ಮಕ್ಕಳಿಗೆ ಹೆಚ್ಚು ಪ್ರಯೋಜ ಆಗುವ ಪುಸ್ತಕ ನೀಡಿದ್ದಾರೆ. ದಾನಿಗಳ ದೇಣಿಗೆ ಸಾರ್ಥಕಗೊಳಿಸಲು ಶ್ರಮಿಸೋಣ’ ಎಂದರು.

ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮುಕ್ತುಂಸಾಬ, ಯಾಸೀನ್ ಸೇರಿದಂತೆ ಈಚನಾಳ, ಕಾಳಾಫುರ, ಮಾವಿನಭಾವಿ ಕ್ಲಸ್ಟರ್ ಶಾಲೆಗಳ ಮುಖ್ಯ ಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.