ವಿದ್ಯಾರ್ಥಿ ಕಾಲಿಗೆ ಸರಪಳಿ: ಪೇಚಿಗೆ ಸಿಲುಕಿದ ಶಿಕ್ಷಕ

7

ವಿದ್ಯಾರ್ಥಿ ಕಾಲಿಗೆ ಸರಪಳಿ: ಪೇಚಿಗೆ ಸಿಲುಕಿದ ಶಿಕ್ಷಕ

Published:
Updated:
Deccan Herald

ಸಿಂಧನೂರು (ರಾಯಚೂರು ಜಿಲ್ಲೆ): ವ್ಯಾಸಂಗದಲ್ಲಿ ಆಸಕ್ತಿ ತೋರಿಸದೆ ಮೇಲಿಂದ ಮೇಲೆ ಊರಿಗೆ ಹೋಗುತ್ತಿದ್ದ ಮದರಸಾದ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ಸರಪಳಿಯಿಂದ ಕಟ್ಟಿ ಹಾಕಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತಾಲ್ಲೂಕಿನ ರೌಡಕುಂದಾದ ಖಾದರಬಾಷಾ ಅವರ ಪುತ್ರ 10 ವರ್ಷದ ಖದಿರ್, ನಗರದ ಮದರಸಾ–ಏ–ಅರಬ್ಬಿಯಾ ದಾರುಲ್ ಉಲೂಮ್ ಮೊಹಮ್ಮದಿಯಾದಲ್ಲಿ ಮೂರು ವರ್ಷಗಳಿಂದ ವ್ಯಾಸಂಗ ಮಾಡುತ್ತಿದ್ದಾನೆ.

‘ಎರಡು ದಿನ ಊರಿಗೆ ಹೋಗಿ ಬರುವುದಾಗಿ ಹೇಳಿ ಅ.5ರಂದು ತೆರಳಿದ್ದ. ಶನಿವಾರದ ಬದಲು ಭಾನುವಾರ ಮಧ್ಯಾಹ್ನ ಬಂದಿದ್ದರಿಂದ ಕೋಪಗೊಂಡ ಶಿಕ್ಷಕ ಆಸೀಫ್‍ಸಾಬ ಕಾಲಿಗೆ ಸರಪಳಿಯನ್ನು ಹಾಕಿ ಶಿಕ್ಷಿಸಿದ್ದಾರೆ. ಇದರಿಂದ ಹೆದರಿದ ವಿದ್ಯಾರ್ಥಿ ಸರಪಳಿ ಸಹಿತ ನಡೆದುಕೊಂಡೇ ಮದರಸಾದಿಂದ ಹೊರಬಂದಿದ್ದಾನೆ. ಗಮನಿಸಿದ ಸಾರ್ವಜನಿಕರು ಮದರಸಾಕ್ಕೆ ತೆರಳಿ ಸಮಸ್ಯೆ ಆಲಿಸಿದ್ದಾರೆ.

ಈ ಸಂಬಂಧ ದೂರು ದಾಖಲಾಗಿದ್ದು, ವಿದ್ಯಾರ್ಥಿಯನ್ನು ಪೋಷಕರಿಗೆ ಒಪ್ಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !