ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಕಾನ್‌ಸ್ಟೆಬಲ್‌ ಮನೆ ಕಳ್ಳತನ: ಆರೋಪಿಗಳ ಬಂಧನ

Published 30 ಮೇ 2024, 16:21 IST
Last Updated 30 ಮೇ 2024, 16:21 IST
ಅಕ್ಷರ ಗಾತ್ರ

ರಾಯಚೂರು: ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕ್ವಾರ್ಟರ್ಸ್‌ನಲ್ಲಿ ಮಹಿಳಾ ಕಾನ್‌ಸ್ಟೆಬಲ್ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಕಾನ್‌ಸ್ಟೆಬಲ್ ಮಹಾದೇವಿ ಅವರ ಮನೆಯಲ್ಲಿ ಮೇ 23ರಂದು ₹10 ಲಕ್ಷ ನಗದು ಕಳ್ಳತನ ಮಾಡಿದ್ದರು. ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಅದೇ ಕ್ವಾರ್ಟರ್ಸ್‌ನಲ್ಲಿ ಸೂಪೈರ್ ವೈಸರ್ ಆಗಿದ್ದ ವಿಶ್ವನಾಥ, ಫ್ಲಂಬರ್ ಮಹೇಶ, ಪಿ.ಗೋವಿಂದನನ್ನು 12 ಗಂಟೆಯಲ್ಲಿಯೇ ಬಂಧಿಸಿ, ಆರೋಪಿಗಳಿಂದ ₹8.7 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ತನಿಖಾ ತಂಡದಲ್ಲಿ ಪಶ್ಚಿಮ ಪೊಲೀಸ್ ಠಾಣೆಯ ಸಿಪಿಐ ನಾಗರಾಜ ಮೇಕಾ, ಪಿಎಸ್ಐ ಅಮಿತಾ, ಚಂದ್ರಪ್ಪ ಸಿಬ್ಬಂದಿ ಅಮರೇಶ, ಗುರುಸ್ವಾಮಿ, ಪ್ರವೀಣ, ಹನುಮಂತರಾಯ, ಶರಣಬಸವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT