ಬುಧವಾರ, ಮೇ 12, 2021
18 °C

ಕರಪತ್ರ ಹಂಚಿ ಕೋವಿಡ್ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ರಾಯಚೂರು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮಾರ್ಗದರ್ಶನದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಭಾನುವಾರ ಸಿಂಧನೂರು ನಗರದ ವಾರ್ಡ್ ನಂ.31 ಮತ್ತು ಸಾಲಗುಂದಾ ಗ್ರಾಮದಲ್ಲಿ ಕರಪತ್ರ ಹಂಚುವ ಮೂಲಕ ಕೋವಿಡ್ ಜಾಗೃತಿ ಮೂಡಿಸಿದರು.

ದೇಶದಾದ್ಯಂತ ಕೊರೊನಾ ಹಾವಳಿಯಿಂದ ಸಾವು-ನೋವುಗಳು ಸಂಭವಿಸುತ್ತಿವೆ. ಕೊರೊನಾ ಕುರಿತು ಭಯಪಡಬೇಕಾಗಿಲ್ಲ. ಆದರೆ ಜಾಗೃತರಾಗಿರಬೇಕು. ನಿಷ್ಕಾಳಜಿ ವಹಿಸಿದರೆ ಜೀವಕ್ಕೆ ಅಪಾಯ ಆಗಬಹುದು. ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಬಳಸಬೇಕು. ಅಂತರ ಕಾಯ್ದುಕೊಳ್ಳಬೇಕು ಎಂದು ಜನರಿಗೆ ಸಲಹೆ ನೀಡಿದರು.

ಕಾರ್ಮಿಕ ಮುಖಂಡರಾದ ಸಾದಪ್ಪ, ಗೇಸುದರಾಜ್, ಗರೀಬ್‍ಸಾಬ, ಅಳ್ಳಪ್ಪ ಹಡಪದ, ಚಿದಾನಂದ, ಓಬಳೇಶ, ಸರ್ವರ್‍ಸಾಬ ಮಕಾಂದರ್ ಸಾಲಗುಂದಾ, ಶೇಖರ್ ಪೇಂಟರ್, ಖಾದರ್ ಮೇಸ್ತ್ರಿ, ರಾಜು ಪೇಂಟರ್ ಅಡವಿಬಾವಿ ಹಾಗೂ ನವಿನ್‍ಕುಮಾರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು