ಸಿಂಧನೂರು: ಬೆಳಿಗ್ಗೆ 10 ಗಂಟೆಯ ಬಳಿಕ ಅನಗತ್ಯವಾಗಿ ತಿರುಗಾಡುವವರ ವಾಹನಗಳನ್ನು ಪೊಲೀಸರು ಶನಿವಾರ ಜಪ್ತಿ ಮಾಡಿದರು. ದಂಡ ವಿಧಿಸಿ ಬಳಿಕ ವಾಪಸ್ ಕೊಟ್ಟರು.

‘ನಗರದ ಮಹಾತ್ಮಗಾಂಧಿ, ಬಸವ ಹಾಗೂ ಕನಕದಾಸ ವೃತ್ತ ಮತ್ತು ಶಹರ ಪೊಲೀಸ್ ಠಾಣೆ ಮುಂಭಾಗದಲ್ಲಿ 100 ದ್ವಿಚಕ್ರ ವಾಹನ ಹಾಗೂ 10 ಆಟೋಗಳನ್ನು ಜಪ್ತಿ ಮಾಡಲಾಯಿತು. ನಂತರ ದಂಡ ವಸೂಲಿ ಮಾಡಿ ಬಿಡುಗಡೆ ಮಾಡಲಾಯಿತು. ಇನ್ನು ಮುಂದೆ ಪ್ರತಿದಿನ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಶಹರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ವಿಜಯಕೃಷ್ಣ ತಿಳಿಸಿದರು.

ಮಧ್ಯಾಹ್ನ 12 ರಿಂದ 5 ಗಂಟೆಯವರೆಗೂ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ನಿಂತುಕೊಂಡು ಕರ್ತವ್ಯ ನಿರ್ವಹಿಸಿದರು. ಆದಾಗ್ಯೂ ಜನ ಮತ್ತು ವಾಹನಗಳ ಸಂಚಾರ ಸಹಜವಾಗಿತ್ತು. ಸಂಜೆ ಪುನಃ ಶಹರ ಪೊಲೀಸ್ ಠಾಣೆ ಮುಂಭಾಗ ಮತ್ತು ಗಾಂಧಿ ವೃತ್ತದಲ್ಲಿ ಅನಾವಶ್ಯಕವಾಗಿ ಮತ್ತು ಮಾಸ್ಕ್ ಧರಿಸದೆ ತಿರುಗಾಡುವವರ ವಾಹನಗಳನ್ನು ವಶಕ್ಕೆ ಪಡೆದು ದಂಡ ಹಾಕಿ, ಇನ್ನೊಮ್ಮೆ ಸುಖಾಸುಮ್ಮನೆ ಸಂಚರಿಸಿದರೆ ಲಾಕ್‌ಡೌನ್ ಮುಗಿಯುವವರೆಗೂ ವಾಹನ ವಾಪಸ್ ನೀಡುವುದಿಲ್ಲ ಎಂದು ಎಚ್ಚರಿಸಿ ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.