ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದುರ್ಗ | ಆಟೊರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯ

Published 8 ಆಗಸ್ಟ್ 2023, 15:34 IST
Last Updated 8 ಆಗಸ್ಟ್ 2023, 15:34 IST
ಅಕ್ಷರ ಗಾತ್ರ

ದೇವದುರ್ಗ: ಪಟ್ಟಣದ ವಿವಿಧೆಡೆ ಆಟೊರಿಕ್ಷಾ ನಿಲ್ದಾಣಗಳನ್ನು ನಿರ್ಮಾಣ ಮಾಡುವಂತೆ ಕಲ್ಯಾಣ ಕರ್ನಾಟಕ ಶಂಕರನಾಗ್‌ ಆಟೊ ಚಾಲಕರ ಸಂಘ ಹಾಗೂ ಎಂಆರ್‌ಎಸ್‌ಎಚ್ ಸಂಘಟನೆ ಮುಖಂಡರು ಶಾಸಕಿ ಕರೇಮ್ಮ ಜಿ. ನಾಯಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕಲ್ಯಾಣ ಕರ್ನಾಟಕ ಶಂಕರನಾಗ್‌ ಆಟೊ ಚಾಲಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ರಫಿ ಮಾತನಾಡಿ, ದೇವದುರ್ಗ ಪಟ್ಟಣದಲ್ಲಿ 300ಕ್ಕೂ ಹೆಚ್ಚು ಆಟೊರಿಕ್ಷಗಳಿದ್ದು ಎಲ್ಲಿಂದರಲ್ಲಿ ರಸ್ತೆಯ ಮೇಲೆ ನಿಲ್ಲಿಸುತ್ತಿದ್ದೇವೆ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಪಟ್ಟಣದ ಮುಖ್ಯ ಕೇಂದ್ರ ಸ್ಥಾನಗಳಾದ ಅಂಬೇಡ್ಕರ್‌ ಸರ್ಕಲ್, ಸಾರ್ವಜನಿಕ ಆಸ್ಪತ್ರೆ, ತಹಶೀಲ್ದಾರ್‌ ಕಾರ್ಯಾಲಯ, ಬಸವೇಶ್ವರ ವೃತ್ತ ಗಾಂಧಿ ಚೌಕ್ ಮತ್ತು ಬಾಬು ಜಗಜೀವನ್ ರಾಮ್ ಸರ್ಕಲ್ ಬಳಿ ಪ್ರತ್ಯೇಕ ಆಟೊ ನಿಲ್ದಾಣಗಳನ್ನು ಸ್ಥಾಪಿಸಿ ಅನುಕೂಲ ಮಾಡಿ ಕೊಡುವಂತೆ ಮನವಿ ಮಾಡಿದರು.

ಎಂಆರ್‌ಎಸ್‌ಎಚ್ ಜಿಲ್ಲಾ ಅಧ್ಯಕ್ಷ ಹನುಮಂತ ಮನ್ನಾಪುರ, ಕಸಾಪ ಅಧ್ಯಕ್ಷ ಎಚ್‌. ಶಿವರಾಜ, ಹನುಮಯ್ಯ ನಾಡದಾಳ, ಭೀಮರಾಯ ಭಂಡಾರಿ ಮತ್ತು ಚಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT