ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಗ್ರಾಮ ಲೆಕ್ಕಾಧಿಕಾರಿ ವರ್ಗಾವಣೆಗೆ ಒತ್ತಾಯ

Published 5 ಜುಲೈ 2023, 4:58 IST
Last Updated 5 ಜುಲೈ 2023, 4:58 IST
ಅಕ್ಷರ ಗಾತ್ರ

ರಾಯಚೂರು: ರೈತ ಕುಟುಂಬದ ಆಸ್ತಿ ವರ್ಗಾವಣೆ ಅನಾವಶ್ಯಕ ವಿಳಂಬ ಮಾಡಲಾಗುತ್ತಿದ್ದು, ಒಂದೇ ಸ್ಥಳದಲ್ಲಿ ಅನೇಕ ವರ್ಷಗಳಿಂದ ಕರ್ತವ್ಯ ನಿರ್ವಹಿಸತ್ತಿರುವ ಗ್ರಾಮಲೆಕ್ಕಾಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ನಗರ ಘಟಕದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಸಲ್ಲಿಸಿದರು.

 ಸರ್ಕಾರದ ನಿಯಮದ ಪ್ರಕಾಶ ಯಾವುದೇ ಅಧಿಕಾರಿಗಳು ಮೂರರಿಂದ ನಾಲ್ಕು ವರ್ಷ ಒಂದು ಗ್ರಾಮದಲ್ಲಿ ಸೇವೆ ಸಲ್ಲಿಸಬೇಕೆಂದು ನಿಯಮವಿದೆ. ಆದರೆ, ಕಳೆದ ಸುಮಾರು 10ರಿಂದ 15 ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ. ರೈತ ಕುಟುಂಬದ ಆಸ್ತಿಯನ್ನು ವರ್ಗಾವಣೆ ಮಾಡುವುದು ಹಾಗೂ ಪೋತಿ ವಿರಾಸತ್ ಸಂದರ್ಭದಲ್ಲಿ ಕುಟುಂಬಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳಿಂದ ತಕಾರರು ಅರ್ಜಿಗಳನ್ನು ಹಾಕಿಸಿ, ನೈಜ ಅರ್ಜಿದಾರರಿಗೆ ಸರಿಪಡಿಸಲು ಹಣದ ಬೇಡಿಕೆಯನ್ನಿಡುತ್ತಿದ್ದಾರೆ. ಹಣ ನೀಡದೇ ಇದ್ದರೆ, ಅನಾವಶ್ಯಕವಾಗಿ ತಹಶೀಲ್ದಾರ್ ಕಚೇರಿ ಹಾಗೂ ಸಹಾಯಕ ಆಯುಕ್ತರ ಕಾರ್ಯಲಯಕ್ಕೆ ಮುಗ್ದ ಜನರನ್ನು ಅಲೆದಾಡಿಸುತ್ತಿದ್ದಾರೆ ಎಂದು ಆಪಾದಿಸಿದರು.

ತಹಶೀಲ್ದಾರ್ ಕಾರ್ಯಾಲಯದಲ್ಲಿ ಮೂಲ ಅರ್ಜಿದಾರರ ಪರವಾಗಿ ಆದೇಶ ಮಾಡಿದರೆ ಭೂಮಿ ಕೇಂದ್ರದಲ್ಲಿ ನೋಂದಣಿ ಮಾಡಲು ₹10ರಿಂದ ₹15 ಸಾವಿರ ಹಣ ಕೇಳುತ್ತಾರೆ ಎಂದು ದೂರಿದರು.

 ಚಂದ್ರಬಂಡಾ ಹೋಬಳಿಯ ಯಾಪಲದಿನ್ನಿ ಗ್ರಾಮದ ಸುರೇಶ, ಯಂಕಮ್ಮ, ಚಂದ್ರಬಂಡಾ ಗ್ರಾಮದ ಸಾಬಣ್ಣ, ಗಿಲ್ಲೆಸುಗೂರು ಹೋಬಳಿಯ ಬಸವರಾಜ, ಮಾಸದೊಡ್ಡಿ ನಲ್ಲಾರೆಡ್ಡಿ,  ಕಲ್ಮಲಾ ಹೋಬಳಿಯ ಶರಣಬಸವ ಅವರು ಅನೇಕ ವರ್ಷಗಳಿಂದ ಒಂದೇ ಕಡೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದರು.

 ಸಂಘಟನೆ ನಗರ ಘಟಕದ ಅಧ್ಯಕ್ಷ ಎಸ್.ರಾಜು,  ನಾರಾಯಣ ಉಂಡ್ರಾಳದೊಡ್ಡಿ, ಜಂಬಣ್ಣ ಚಂದ್ರಬಂಡಾ, ಸಣ್ಣರಂಗಪ್ಪ ಅಪ್ಪನದೊಡ್ಡಿ, ಶ್ರೀನಿವಾಸ ಯಾಪಲದಿನ್ನಿ, ಕೃಷ್ಣದೇವನಪಲ್ಲಿ, ಸುಭಾನ್ ಅಲಿ ಜೇಗರಕಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT