ದೇವದುರ್ಗ: ‘ಇಂದಿನ ಅಧುನಿಕ ಯುಗದಲ್ಲಿ ಗ್ರಾಮೀಣ ಪರಂಪರೆ ಸಾಂಸ್ಕೃತಿಕ ಆಚರಣೆ ಹೆಚ್ಚು ಹೆಚ್ಚು ಆಯೋಜಿಸಬೇಕು’ ಎಂದು ಜೆಡಿಎಸ್ ಮುಖಂಡ ಸಿದ್ದಣ್ಣ ಬಿ. ಗಣೆಕಲ್ ಹೇಳಿದರು.

ತಾಲ್ಲೂಕಿನ ಚಿಂತಲಕುಂಟ ಗ್ರಾಮದಲ್ಲಿ ಮಹಾಶಿವರಾತ್ರಿ ಜಾಗರಣೆ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಆಯೋಜಿಸಿದ್ದ ಎತ್ತುಗಳ ಭಾರ ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕ್ರಿಕೆಟ್ ಮತ್ತು ಆನ್ಲೈನ್ ಗೇಮ್ ಸೇರಿದಂತೆ ಇತರೆ ಅಧುನಿಕ ಆಟಗಳ ಪ್ರಭಾವದಲ್ಲಿ ಗ್ರಾಮೀಣ ಯುವಕರು ಗ್ರಾಮೀಣ ಸೋಗಡಿನ ಆಟಗಳನ್ನು ಮರೆಯಬಾರದು. ಗ್ರಾಮೀಣ ಹಬ್ಬಗಳು ಜನರ ಆರೋಗ್ಯದ ಪರಿಣಾಮ ಬೀರಿದ್ದವು’ ಎಂದು ಹೇಳಿದರು.

ತಾಲ್ಲೂಕಿನ ವಿವಿಧೆಡೆ ಇಂದ ಆಗಮಿಸಿದ್ದ ಎತ್ತಿನ ಜೋಡಿಗಳು 1 ಟನ್ ಭಾರದ ಕಲ್ಲು ಎಳೆಯುವ ಮೂಲಕ ಸಾಮರ್ಥ್ಯ ಪ್ರದರ್ಶಿಸಿದವು. ಸುಡು ಬಿಸಿಲನ್ನು ಲೆಕ್ಕಿಸದೇ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಕೇಕೆ ಹಾಕಿ ಎತ್ತುಗಳ ಬಲ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಿದರು.

ಪ್ರಥಮ ಸ್ಥಾನ ಪಡೆದವರಿಗೆ ಸಿದ್ದಣ್ಣ ಬಿ. ಗಣೆಕಲ್ ಅವರು, ₹ 21 ಸಾವಿರ, ದ್ವಿತೀಯ ಸ್ಥಾನ ಪಡೆದವರಿಗೆ ಸುರೇಶ ನಾಯಕ ಅವರು ₹ 15 ಸಾವಿರ ಮತ್ತು ತೃತೀಯ ಸ್ಥಾನ ಪಡೆದವರಿಗೆ ತಿರುಪತಿ ವಾಚನಾಯಕ ತಾಂಡ ಅವರು, ₹ 5 ಸಾವಿರ ನಗದು ಬಹುಮಾನವನ್ನು ವಿತರಿಸಿದರು.

ಪ್ರಭು ಕುಮಾರೇಶ್ವರ ಸ್ವಾಮಿ, ಗೋಪಾಲಪ್ಪಗೌಡ, ಸುರೇಶ ನಾಯಕ, ಸಿದ್ದಲಿಂಗಪ್ಪಗೌಡ ನಾಗಡದಿನ್ನಿ, ಮಲ್ಲಿಕಾರ್ಜುನ ಗೌಡ, ಮರಿಯಪ್ಪ, ಬಸವರಾಜ ನಾಯಕ, ಶಿವನಗೌಡ ಚಿಂತಲಕುಂಟ ಮತ್ತು ಅನಿಲ ಕುಮಾರ ಸೇರಿದಂತೆ ವಿವಿಧ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.