ಹಟ್ಟಿ ಚಿನ್ನದ ಗಣಿ: ಸಮೀಪದ ರೋಡಲಬಂಡ (ತವಗ) ಗ್ರಾಮದಲ್ಲಿ ದುರ್ಗಾದೇವಿಯ 12ನೇ ವರ್ಷದ ಜಾತ್ರೆ ಅದ್ದೂರಿಯಾಗಿ ಜರುಗಿತು.

ಬೆಳಗಿನ ಜಾವ ಗ್ರಾಮ ದೇವತೆಗೆ ಅಲಂಕಾರ, ಕುಂಕುಮಾರ್ಚನೆ, ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ವಾದ್ಯ ಮೇಳ, ಡೊಳ್ಳು–ಭಜನೆಯೊಂದಿಗೆ ಮಹಿಳೆಯರು ಕಳಸ ಹಿಡಿದು ಗಂಗಾಸ್ಧಳಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದರು. ನಂತರ ಪ್ರಮುಖ ಬೀದಿಗಳಲ್ಲಿ ಕುಂಬಭಮೇಳ ಜರುಗಿತು.

ರೋಡಲಬಂಡ (ತವಗ) ಸೇರಿದಂತೆ ಯಲಗಟ್ಟಾ, ಗೌಡೂರು, ಹಟ್ಟಿ, ವಂದಲಿ ಸೇರಿ ವಿವಿಧ ಗ್ರಾಮಗಳ ಜನ ಭಾಗವಹಿಸಿದ್ದರು. ಸಂಜೆ ರಥೋತ್ಸವ ಜರುಗಿತು. ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಮೆರೆದರು.

ರೋಡಲಬಂಡ ಗ್ರಾಮದ ಶಿವಪ್ಪ ಪೂಜಾರಿ, ಸೋಮಶೇಖರ, ವೀರನಗೌಡ, ಬಸವನಗೌಡ, ರಂಗಪ್ಪ ಭೋವಿ, ಗುಂಡಪ್ಪ, ಬಾಬು ಚನ್ನಪ್ಪ, ದುರುಗಪ್ಪ, ರಂಗಪ್ಪ, ಮಂಜುನಾಥ ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಭಾ ಗವಹಿಸಿದ್ದರು.

ಹಟ್ಟಿ ಠಾಣೆ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.