ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಶಾಂತಿ ಕಾಪಾಡಲು ಪೂರ್ವಸಿದ್ಧತೆ, 3ಅರೆಸೇನಾ ಪಡೆ, 7ಕೆಎಸ್‌ಆರ್‌ಪಿ ನೆರವು

Last Updated 20 ಏಪ್ರಿಲ್ 2019, 14:36 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಏಪ್ರಿಲ್‌ 23 ರಂದು ನಡೆಯುವ ಲೋಕಸಭೆ ಚುನಾವಣೆ ಸಂಬಂಧ ಶಾಂತಿ, ಸುವ್ಯವಸ್ಥೆ ಕಾಪಾಡಿಕೊಳ್ಳಲು ಪೊಲೀಸ್‌ ಇಲಾಖೆಯಿಂದ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ 1,489 ಸಾಮಾನ್ಯ ಮತಗಟ್ಟೆಗಳು ಹಾಗೂ 344 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಎಲ್ಲ ಕಡೆಗೂ ಬಂದೋಬಸ್ತ್‌ ವ್ಯವಸ್ಥೆಯ ಯೋಜನೆ ಮಾಡಲಾಗಿದೆ ಎಂದರು.

ಪ್ರತಿ ವಿಧಾನಸಭೆಗೆ ಇಬ್ಬರು ಡಿವೈಎಸ್‌ಪಿ, 22 ಸಿಪಿಐ, 31 ಪಿಎಸ್‌ಐ, 130 ಎಎಸ್ೈ, 393 ಜನ ಹೆಡ್‌ ಕಾನ್‌ಸ್ಟೇಬಲ್‌, 1,042 ಪೇದೆಗಳು ಹಾಗೂ 1,338 ಗೃಹರಕ್ಷಕ ಸೇರಿದಂತೆ ಕೆಎಸ್‌ಆರ್‌ಪಿ ತುಕಡಿ, ಅರೆಸೇನಾ ಪಡೆ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.

ಬೆಂಗಳೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರಗಳಿಂದ ನೆರವು ಪಡೆಯಲಾಗುತ್ತಿದೆ. ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತದೆ. ಮತಯಂತ್ರ ಭದ್ರತೆಯನ್ನು ಜಿಲ್ಲಾ ಪೊಲೀಸರು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಮತದಾನ ದಿನದಂದು ಕೆಲಸ ಮಾಡುವ ಸಿಬ್ಬಂದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶೇಷ ಕಿಟ್‌ ಒದಗಿಸಲಾಗುತ್ತಿದೆ ಎಂದು ಹೇಳಿದರು.

ನೀರಿನ ಬಾಟಲ್‌, ಬಿಸ್ಕಿಟ್‌, ಬ್ರಷ್‌, ಪೇಸ್ಟ್‌ ಸೇರಿದಂತೆ ಕೆಲವು ವಸ್ತುಗಳು ಕಿಟ್‌ನಲ್ಲಿವೆ. ಸಾರ್ವಜನಿಕರಿಂದ ಹಾಗೂ ರಾಜಕೀಯ ಪಕ್ಷಗಳು ಕಾನೂನು ವ್ಯವಸ್ಥೆಗೆ ಧಕ್ಕೆಯಾಗದಂತೆ ಎಲ್ಲರೂ ಸಹಕರಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT