ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಪ್ರಮುಖ ತರಕಾರಿ ಬೆಲೆಯಲ್ಲಿ ಇಳಿಕೆ

ಗುಣಮಟ್ಟದ ಬೆಳ್ಳುಳ್ಳಿ ಬೆಲೆ ಪ್ರತಿ ಕೆಜಿಗೆ ₹370: ಮುಂದಿನ ಒಂದು ಬೆಲೆ ಸ್ಥಿರವಾಗಿರುವ ಸಾಧ್ಯತೆ
ಚಂದ್ರಕಾಂತ ಮಸಾನಿ
Published 28 ಜನವರಿ 2024, 6:58 IST
Last Updated 28 ಜನವರಿ 2024, 6:58 IST
ಅಕ್ಷರ ಗಾತ್ರ

ರಾಯಚೂರು: ಸಂಕ್ರಮಣದ ಸಂದರ್ಭದಲ್ಲಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಸದ್ಯ ಒಂದು ತಿಂಗಳುವರೆಗೆ ಯಾವುದೇ ಹಬ್ಬ ಇಲ್ಲದ ಕಾರಣ ಸಹಜವಾಗಿಯೇ ತರಕಾರಿಗಳ ಬೆಲೆ ಇಳಿದಿದೆ. ಪ್ರಖರ ಬಿಸಿಲು ಗರಿ ಬಿಚ್ಚಿಕೊಳ್ಳುವ ಮೊದಲೇ ಗ್ರಾಹಕರು ತಮಗೆ ಇಷ್ಟವಾದ ತರಕಾರಿಗಳನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಆಗಾಗ ಮಾರುಕಟ್ಟೆಯಲ್ಲಿ ಅಲ್ಲೋಲ–ಕಲ್ಲೋಲ ಸೃಷ್ಟಿಸುವ ಈರುಳ್ಳಿ ಬೆಲೆ ಸ್ಥಿರವಾಗಿದೆ. ರೋಗ ನಿರೋಧಕ ಶಕ್ತಿ ಹಾಗೂ ಊಟದ ಸ್ವಾದ ಹೆಚ್ಚಿಸುವ ಬೆಳ್ಳುಳ್ಳಿ ಬೆಲೆ ಮಾತ್ರ ಸದ್ಯ ಇಳಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹದಿನೈದು ದಿನಗಳಿಂದ ಬೆಳ್ಳುಳ್ಳಿ ಬೆಲೆ ಪ್ರತಿ ಕೆಜಿಗೆ ₹300 ಆಸುಪಾಸಿನಲ್ಲೇ ಗಿರಕಿ ಹೊಡೆಯುತ್ತಿದೆ.

ಗ್ರಾಹಕರು ಹೆಚ್ಚು ಇಷ್ಟಪಡುವ ಆಲೂಗಡ್ಡೆ, ಗಜ್ಜರಿ, ಬೀಟ್‌ರೂಟ್‌, ಬೀನ್ಸ್, ಎಲೆಕೋಸು, ಹೂಕೋಸು, ಟೊಮೆಟೊ, ಬದನೆಕಾಯಿ, ಹಿರೇಕಾಯಿ, ಬೆಂಡೆಕಾಯಿ ಹಾಗೂ ಮೆಣಸಿನಕಾಯಿ ಗ್ರಾಹಕರಿಗೆ ಸುಲಭ ಬೆಲೆಯಲ್ಲಿ ದೊರೆಯುತ್ತಿದೆ.

ನೆರೆಯ ಆಂಧ್ರಪ್ರದೇಶ, ತೆಲಂಗಾಣದ ಜಿಲ್ಲೆಗಳಿಂದ ಹೀರೆಕಾಯಿ, ಗಜ್ಜರಿ, ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಹಾಗೂ ಸೊ‍ಪ್ಪು, ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಮೆಂತೆ ಸೊಪ್ಪು ಹಾಗು ಈರುಳ್ಳಿ ಸೊಪ್ಪು ಮಾರುಕಟ್ಟೆಗೆ ಬಂದಿದೆ.

‘ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಮುಂದಿನ ಒಂದು ತಿಂಗಳು ಸ್ಥಿರವಾಗಿರುವ ಸಾಧ್ಯತೆ ಇದೆ’ ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.

ತರಕಾರಿ ದರ ;ಕಳೆದ ವಾರ;ಈ ವಾರ (ಕೆಜಿಗೆ ₹ಗಳಲ್ಲಿ) ಈರುಳ್ಳಿ;25–30; 20–30 ಬೆಳ್ಳುಳ್ಳಿ;320–350: 350–370 ಆಲೂಗಡ್ಡೆ;30–40;25–30 ಮೆಣಸಿನಕಾಯಿ;55–60;40–50 ಎಲೆಕೋಸು;30–40;30–40 ಹೂಕೋಸು;30–40;30–40 ಗಜ್ಜರಿ;70–80;50–60 ಬೀಟ್‌ರೂಟ್‌;60–80;55–60 ಬೀನ್ಸ್;60–80;55–60 ಟೊಮೆಟೊ;25–30;20–25 ಬದನೆಕಾಯಿ;30–30;20 –20 ಹಿರೇಕಾಯಿ;70–80;55–60 ಬೆಂಡೆಕಾಯಿ;60–80;50–60 ತೊಂಡೆಕಾಯಿ;60–70;40–50 ಡೊಣಮೆಣಸಿನಕಾಯಿ;70–80;40–50 ತುಪ್ಪದ ಹಿರೇಕಾಯಿ;55–60;40–60 ಚವಳೆಕಾಯಿ;75–80;55–60 ಸೋರೆಕಾಯಿ;25–30;20–20 ಕುಂಬಳಕಾಯಿ;70–80;50–60 ಬಟಾಣಿ;70–80;60–60 ಸೌತೆಕಾಯಿ;75–80;50–60 ಹಾಗಲಕಾಯಿ;70–80;55–60 ಅವರೆಕಾಯಿ;50–60;50–50 ನುಗ್ಗೆಕಾಯಿ;75–80;55–60 ಸೊಪ್ಪು–ಒಂದು ಸಿವುಡಿನ ಬೆಲೆ ಸಬ್ಬಸಗಿ;20;10 ಮೆಂತೆ;10;10 ಕೊತ್ತಂಬರಿ;10;10 ಪಾಲಕ್;10;10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT