ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ವಿ: ಕಾಲುವೆ ನೀರಿಗಾಗಿ ರೈತರ ಪ್ರತಿಭಟನೆ

Published 31 ಅಕ್ಟೋಬರ್ 2023, 15:47 IST
Last Updated 31 ಅಕ್ಟೋಬರ್ 2023, 15:47 IST
ಅಕ್ಷರ ಗಾತ್ರ

ಮಾನ್ವಿ: ತುಂಗಭದ್ರಾ ಎಡದಂಡೆ ನಾಲೆಯ 89ನೇ ವಿತರಣಾ ಕಾಲುವೆ ಕೊನೆಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಲು ಒತ್ತಾಯಿಸಿ ನೂರಾರು ರೈತರು ನೀರಮಾನ್ವಿ ಗ್ರಾಮದಲ್ಲಿ ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ವಿತರಣಾ ಕಾಲುವೆ 89ರ ವ್ಯಾಪ್ತಿಯ ಗ್ರಾಮಗಳ ರೈತರು ಬೆಳೆದ ಭತ್ತ, ಮೆಣಸಿನಕಾಯಿ, ಹತ್ತಿ, ಜೋಳ ಇತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕೂಡಲೇ ನಿರಂತರವಾಗಿ ಕಾಲುವೆಗೆ ನೀರು ಹರಿಸುವಂತೆ ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.

ತಹಶೀಲ್ದಾರ್ ರಾಜು ಪಿರಂಗಿ, ಎಇಇ ರಶೀದ್ ಖಾನ್ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತ ರೈತರ ಜತೆಗೆ ಚರ್ಚಿಸಿದರು.

ತಹಶೀಲ್ದಾರ್ ರಾಜು ಮಾತನಾಡಿ, ‘ನಂ.89ನೇ ವಿತರಣಾ ಕಾಲುವೆ ವ್ಯಾಪ್ತಿಯ ಕೊನೆಭಾಗದ ವ್ಯಾಪ್ತಿಯ ಜಮೀನುಗಳಿಗೆ ಸಮರ್ಪಕವಾಗಿ ಕಾಲುವೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡರಾದ ಜೆ.ಆಂಜನೇಯ ನಾಯಕ, ಬಸವಲಿಂಗಪ್ಪ, ಶ್ರೀರಾಮುಲು, ಜೆ. ಭೀಮರಾಯ ನಾಯಕ, ಮುದುಕಪ್ಪನಾಯಕ, ಮಹೇಶ್, ವೈ.ವಿರೇಶ ರೆಡ್ಡಿ, ನಾಗರಾಜ ನಾಯಕ, ಭೀಮಣ್ಣ, ಶಿವರಾಜ, ರಮೇಶ,ಮಲ್ಲಭದ್ರಗೌಡ, ಕರಿಬಸಪ್ಪಗೌಡ, ಮಲ್ಲಪ್ಪ ಪೂಜಾರಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT