ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಬ್ಬರ ಬೆಲೆ ಇಳಿಸಲು ಒತ್ತಾಯ

Last Updated 26 ಏಪ್ರಿಲ್ 2021, 12:23 IST
ಅಕ್ಷರ ಗಾತ್ರ

ರಾಯಚೂರು: ಡಿಸೇಲ್, ಪೆಟ್ರೋಲ್, ಅಡುಗೆ ಅನಿಲ್ ಬೆಲೆ ಹೆಚ್ಚಳ ತಡೆಯಬೇಕು. ಗೊಬ್ಬರದ ಬೆಲೆ ನಿಯಂತ್ರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ‌ಘಟಕದ ಪದಾಧಿಕಾರಿಗಳು ಲೋಕಸಭಾ ಸದಸ್ಯರ ಮೂಲಕ‌ ಪ್ರಧಾನಮಂತ್ರಿಗೆಸೋಮವಾರ ಮನವಿ‌ ಸಲ್ಲಿಸಿದರು.

ಅಡುಗೆ ಅನಿಲ ದರ, ಇಂದನ ಬೆಲೆ ಏರಿಕೆ ಮಾಡುವ ಮೂಲಕ ಸರ್ಕಾರ ರೈತರ ಹಾಗೂ ಸಾಮಾನ್ಯ, ಮಧ್ಯಮ ವರ್ಗದ ಮೇಲೆ ಬರೆ ಎಳೆಯುತ್ತಿದೆ. ಬಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿ ಈಗ ಕೃಷಿ ಉತ್ಪನ್ನಗಳ ವೆಚ್ಚವನ್ನು ಹೆಚ್ಚಿಸುತ್ತಿದೆ. ಗೊಬ್ಬರದ ಬೆಲೆ ಏರಿಕೆಯಿಂದಾಗಿ ಕೃಷಿಕರು ವ್ಯವಸಾಯದಿಂದ ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣ ಮಾಡಿದೆ.

ವಿಶ್ವ ವಾಣಿಜ್ಯ ಒಪ್ಪಂದ ಜಾರಿಗೆ ಬಂದ ನಂತರವು ಬೇರೆ ದೇಶಗಳು ಕೃಷಿ ಮತ್ತು ಕೃಷಿ ಉಪ ಕಸುಬುಗಳಿಗೆ ಸಬ್ಸಿಡಿಯನ್ನು ಹೆಚ್ಚು ಹೆಚ್ಚು ನೀಡುತ್ತಲೇ ಬರುತ್ತಿವೆ ಮತ್ತು ಕೃಷಿಕನಿಗೆ ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸುತ್ತಿವೆ. ಆದರೆ, ಬಹುಸಂಖ್ಯಾತರು ತೊಡಗಿರುವ ನಮ್ಮ ದೇಶದ ಕೃಷಿ ಕ್ಷೇತ್ರ ಮತ್ತು ಕೃಷಿಕರಿಗೆ ಕೇಂದ್ರ ಸರ್ಕಾರ ನೀಡುತ್ತಾ ಬಂದಿರುವ ಉತ್ತೇಜನಗಳು ಪ್ರತಿವರ್ಷ ಕಡಿಮೆಯಾಗಿಸುತ್ತಿವೆ ಎಂದು ದೂರಿದರು.

ಗೊಬ್ಬರದ ಸಬ್ಸಿಡಿಯನ್ನು ಕಡಿಮೆ ಮಾಡಿದ್ದರಿಂದಲೇ ಉತ್ಪಾದಕ ಕಂಪನಿಗಳು ಹೆಚ್ಚು ಹೆಚ್ಚು ಬೆಲೆಯನ್ನು ನಿಗದಿ ಮಾಡುತ್ತಿವೆ ಇದು ಕೃಷಿಕರಿಗೆ ಹೊರಲಾರದಷ್ಟು ಹೊರೆಯಾಗಿದೆ. ಕೂಡಲೇ ಕೇಂದ್ರ ಸರ್ಕಾರ ಗೊಬ್ಬರದ ಬೆಲೆ ಕಡಿಮೆ ಮಾಡಬೇಕು. ಕೃಷಿ ಮತ್ತು ಕೃಷಿಕರಿಗೆ ಮತ್ತಷ್ಟು ಉತ್ತೇಜನ ಕೊಡುವಂತಹ ಯೋಜನೆಗಳನ್ನು ರೂಪಿಸಬೇಕು. ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ರಾಜ್ಯಾದ್ಯಕ್ಷ ಚಾಮರಸ ಮಾಲಿಪಾಟೀಲ, ಜಿಲ್ಲಾಧ್ಯಕ್ಷ ಸೂಗೂರಯ್ಯ ಆರ್.ಎಸ್ ಮಠ,ಪದಾಧಿಕಾರಿ ‌ಮಲ್ಲಣ್ಣ‌ದಿನ್ನಿ, ಗೋವಿಂದಪ್ಪ‌ ನಾಯಕ, ಬೂದಯ್ಯ‌ಸ್ವಾಮಿ, ದೇವಪ್ಪ, ವೀರೇಶ, ಗದ್ದೆಪ್ಪ ಗೌಡ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT