ರಾಯಚೂರು: ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಸಿಎಂ ರೈತ ವಿದ್ಯಾನಿಧಿ’ ಯೋಜನೆಯನ್ನು ಭಾನುವಾರ ಉದ್ಘಾಟಿಸಿದ ಕಾರ್ಯಕ್ರಮವನ್ನು ರೈತರು ಮತ್ತು ವಿದ್ಯಾರ್ಥಿಗಳು ನೇರವಾಗಿ ಆನ್‌ಲೈನ್ ಮೂಲಕ ವೀಕ್ಷಿಸುವುದಕ್ಕೆ ಜಿಲ್ಲೆಯ ಪ್ರತಿ ಹೋಬಳಿಯಲ್ಲೂ ಕೃಷಿ ಇಲಾಖೆಯಿಂದ ಭಾನುವಾರ ವ್ಯವಸ್ಥೆ ಮಾಡಲಾಗಿತ್ತು.
ಒಟ್ಟು 37 ರೈತ ಸಂಪರ್ಕ ಕೇಂದ್ರಗಳಲ್ಲಿ ಈ ನೇರ ಪ್ರಸಾರದ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು. ರಾಯಚೂರು, ದೇವಸೂಗೂರು, ಚಂದ್ರಬಂಡಾ, ಗಿಲ್ಲೇಸೂಗೂರು, ಯರಗೇರಾ, ಕಲ್ಮಲಾ ಹೋಬಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.
ಆಯಾ ತಾಲ್ಲೂಕು ಕೃಷಿ ಇಲಾಖೆಯ ಕಚೇರಿ ಆವರಣದಲ್ಲಿಯೂ ಕಾರ್ಯಕ್ರಮದ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಯಚೂರು ತಾಲ್ಲಕು ಕಚೇರಿಯಲ್ಲಿ ರಾಂಪುರ, ಹೊಸೂರು, ವಡವಟ್ಟಿ, ಅಸ್ಕಿಹಾಳ ಸೇರಿ ಹಲವು ಗ್ರಾಮಗಳಿಂದ ಸುಮಾರು 200
ರೈತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕ ನಯೀಮ್ ಹುಸೇನ್, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ದೀಪಾ ಎಲ್., ಎಸ್.ಎಂ. ಅಧಿಕಾರಿ ಶರಣಮ್ಮ, ನಾಗರೆಡ್ಡಿ, ಸಿದ್ದಾರೆಡ್ಡಿ, ರೆಹಮಾನ್, ಮೇಘನಾ, ಕೆ.ಎಸ್.ಎಸ್.ಸಿ.ಯ ಪ್ರಭು ತುರಾಯಿ ಹಾಗೂ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.