ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರುಬೂದಿ ಸಮಸ್ಯೆ: ಮನೆಗಳ ಸ್ಥಳಾಂತರಕ್ಕೆ ಒತ್ತಾಯ

Last Updated 22 ಡಿಸೆಂಬರ್ 2021, 16:08 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ದೇವಸೂಗೂರು ಗ್ರಾಮದಲ್ಲಿ ಹಾರುಬೂದಿ ಹೊಂಡದ ಹತ್ತಿರದ 1ನೇ ಕ್ರಾಸ್‌ನಿಂದ 2ನೇ ಕ್ರಾಸ್‌ವರೆಗೆ ಇರುವ ನಿವಾಸಿಗಳಿಗೆ ಹಾರುಬೂದಿಯಿಂದ ಉಸಿರಾಟದ ಸಮಸ್ಯೆಯಾಗುತ್ತಿದೆ. ಕೂಡಲೇ ಅಲ್ಲಿರುವ ಮನೆಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂದು ಜಯ ಕರ್ನಾಟಕ ಜಿಲ್ಲಾ ಘಟಕದ ನೇತೃತ್ವದಲ್ಲಿ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಹಾರುಬೂದಿ ಹೊಂಡದ ರಸ್ತೆಯಲ್ಲಿ ಅನೇಕ ವರ್ಷಗಳಿಂದ ಜನರು ವಾಸವಾಗಿದ್ದಾರೆ. ಈ ಹಿಂದೆ ಹಾರುಬುದಿಯ ಸಮಸ್ಯೆ ಇರಲಿಲ್ಲ. ಈ ಮಾರ್ಗವಾಗಿ ನಿತ್ಯ ಅನೇಕ ತೆರೆದ ವಾಹನಗಳ, ಲಾರಿಗಳಿಂದ ಹಾರು ಬೂದಿ ಸಾಗಣೆ ಮಾಡುತ್ತಿರುವುದರಿಂದ ರಸ್ತೆಯಲ್ಲಿ ಬೂದಿ ಹಾರಾಡುತ್ತಿದೆ. ಗಾಳಿ ಮೂಲಕ ಬೂದಿಯು ಮನೆಗಳಿಗೆ ಹೋಗುತ್ತಿದೆ. ಇಲ್ಲಿನ ನಿವಾಸಿಗಳಿಗೆ ಅಸ್ತಮಾ, ಉಸಿರಾಟದ ತೊಂದರೆ, ಹೃದಯಾಘಾತ ಸೇರಿ ಇತರೆ ಕಾಯಿಲೆ ಬಂದು ಅನಾರೋಗ್ಯಕ್ಕೆ ಈಡಾಗುವಂತಾಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಯಾದವ, ಕರುಣಾಕರ ರೆಡ್ಡಿ, ಜಿಯಾ ಉಲ್ ಹಕ್ ಸೌದಾಗರ್, ಸಿ.ಮುರಳಿ ಕೃಷ್ಣ, ಸುರೇಶ ಮಡಿವಾಳ, ಜಾಫರ್, ರಾಜಾ ಸಾಬ್, ಹೇಮರೆಡ್ಡಿ, ಇಮ್ರಾನ್, ಪರಶುರಾಮ, ನರಸಪ್ಪ, ವೆಂಕಟೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT