ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಧರ್ಮಗಳ ತತ್ವಾದರ್ಶ ಪಾಲಿಸಿ; ಡಾ.ಮಹಾಂತ ಬಸವಲಿಂಗ ಸ್ವಾಮೀಜಿ

Last Updated 10 ಮೇ 2022, 4:39 IST
ಅಕ್ಷರ ಗಾತ್ರ

ಮಾನ್ವಿ: ಧರ್ಮಗಳಲ್ಲಿನ ತತ್ವ ಮತ್ತು ಸಂದೇಶಗಳನ್ನು ‌ಸರಿಯಾಗಿ ಅರ್ಥೈಸಿಕೊಳ್ಳುತ್ತಿಲ್ಲ. ಇದರಿಂದ ಶಾಂತಿ, ಸೌಹಾರ್ದತೆಗೆ ಧಕ್ಕೆ ಆಗುತ್ತಿದೆ ಎಂದು ಹಾಸನದ ಮುಕ್ಕುಂದೂರು ಬೆಟ್ಟ ಮಠದ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ ಹೇಳಿದರು.

ಪಟ್ಣಣದ ಟಿಎಪಿಸಿಎಂಎಸ್ ಆವರಣದಲ್ಲಿ ‌ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ಈಚೆಗೆ ಆಯೋಜಿಸಿದ್ದ ಈದ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಲ್ಲರೂ ಧರ್ಮಗಳಲ್ಲಿನ ತತ್ವ ಮತ್ತು ಆದರ್ಶಗಳನ್ನು ಪಾಲಿಸಿ ಸಮಾಜ ಹಾಗೂ ದೇಶದ ಏಕತೆ, ಏಳಿಗೆಗೆ ಶ್ರಮಿಸಬೇಕು ಎಂದರು.

ಫಾದರ್ ಜ್ಞಾನಪ್ರಕಾಶಂ, ಮಾಜಿ ಶಾಸಕರಾದ ಬಸವನಗೌಡ ಬ್ಯಾಗವಾಟ್, ಹಂಪಯ್ಯ ನಾಯಕ, ಗಂಗಾಧರ ನಾಯಕ, ಎಂ.ಈರಣ್ಣ ಗುತ್ತೇದಾರ ಮಾತನಾಡಿದರು. ಶಾಸಕ ರಾಜಾ ವೆಂಕಟಪ್ಪ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರಿನ ಶಾಂತಿ‌ ಪ್ರಕಾಶನದ ಮಹಮದ್ ಕುಂಞ ಅಧ್ಯಕ್ಷ ತೆವಹಿಸಿದ್ದರು. ಮೌಲಾನಾ ಶೇಖ್ ಫರೀದ್ ಉಮ್ರಿ, ಮೌಲಾನಾ ಅನ್ವರ್ ಪಾಷ ಉಮ್ರಿ, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಕರೀಮ್ ಖಾನ್, ಅಬ್ದುಲ್ ರಹಮಾನ್ ಸಾಬ್, ಸಬ್ಜಲಿ ಸಾಬ್, ಎಂಎಎಚ್ ಮುಖೀಂ, ಅಬ್ದುಲ್ ಖಯ್ಯೂಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT