ಮಂಗಳವಾರ, ಜೂಲೈ 7, 2020
28 °C

ಪತ್ರಿಕಾ ವಿತರಕರಿಗೆ ಆಹಾರಧಾನ್ಯ ಕಿಟ್‌ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದಲ್ಲಿ ದಿನಪತ್ರಿಕೆಗಳನ್ನು ವಿತರಿಸುವವರಿಗೆ ಎನ್‌.ಎಸ್‌.ಬೋಸರಾಜು ಪೌಂಢೇಷನ್‌ನಿಂದ ಶುಕ್ರವಾರ ಆಹಾರಧಾನ್ಯದ ಕಿಟ್‌ಗಳನ್ನು ವಿತರಿಸಲಾಯಿತು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ ಕಿಟ್‌ಗಳನ್ನು ವಿತರಿಸಿದರು. ಆನಂತರ ಮಾತನಾಡಿದ ಅವರು, ಲಾಕ್‌ಡೌನ್‌ನಿಂದಾಗಿ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲೂ ಮನೆಮನೆಗೂ ಪತ್ರಿಕೆಗಳನ್ನು ತಲುಪಿಸುವ ಕೆಲಸ ಶ್ಲಾಘನೀಯ. ಪೌಂಡೇಷನ್‌ ಮೂಲಕ ಇಂಥವರಿಗೆ ನೆರವು ಒದಗಿಸುವುದರಿಂದ ಅನುಕೂಲವಾಗಲಿದೆ ಎಂದರು.

130 ಕ್ಕೂ ಹೆಚ್ಚು ವಿತರಕರು ಕಿಟ್‌ಗಳನ್ನು ಪಡೆದುಕೊಂಡರು.

ನಗರಸಭೆ ಸದಸ್ಯರಾದ ಜಯಣ್ಣ, ಸಾಜೀದ್‌ ಸಮೀರ, ಮೊಹ್ಮದ್‌ ಶಾಲಂ, ಬಿ.ರಮೇಶ, ಅಸ್ಲಂ ಪಾಷಾ, ಮುಖಂಡರಾದ ಕೆ.ಶಾಂತಪ್ಪ, ಜಿ.ಶಿವಮೂರ್ತಿ, ಅಬ್ದುಲ್‌ ಕರೀಂ, ರುದ್ರಪ್ಪ ಅಂಗಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ನಾಗಡದಿನ್ನಿ, ಪ್ರಧಾನ ಕಾರ್ಯದರ್ಶಿ ಆರ್‌.ಗುರುನಾಥ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು