ರಾಯಚೂರು: ಕಣ್ಣುಗಳು ದೇಹದ ಮುಖ್ಯ ಅಂಗವಾಗಿದ್ದು, ಮರಣದ ಬಳಿಕ ಕಣ್ಣುಗಳು ಮಣ್ಣುಪಾಲು ಮಾಡದೆ ದಾನ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಹಿರಿಯ ನಾಗರಿಕರ ಸಂಘದ ಸದಸ್ಯ ಮಹಾದೇವಪ್ಪ ಹೇಳಿದರು.

ನಗರದ ಸುಗುಣ ಶಿಕ್ಷಣ ಸಂಸ್ಥೆ ಹಾಗೂ ಆಸ್ಥಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಿಂದ ಹಿರಿಯ ನಾಗರಿಕ ಸಂಘದ ಸದಸ್ಯರಿಗೆ ಹಾಗೂ ಸರ್ವಜನಿಕರಿಗೆ ನಿಜಲಿಂಗಪ್ಪ ಕಾಲೋನಿಯ ಎಟಿಎಂ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಪ್ರತಿಯೊಂದು ಕೆಲಸವನ್ನು ಮಾಡಬೇಕಾದರೇ ಕಣ್ಣು ಮಖ್ಯ ಪಾತ್ರವಹಿಸುತ್ತದೆ. ಕಣ್ಣಿನ ರಕ್ಷಣೆ ‘ನಿಮ್ಮ ಹೊಣೆ ಎನ್ನುವ ಶಿರ್ಷಿಕೆ’ಯಲ್ಲಿ ನಾವೆಲ್ಲರು ಕಣ್ಣನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮಣ್ಣು ಪಾಲು ಮಾಡದೆ ದಾನ ಮಾಡಬೇಕು ಎಂದು ತಿಳಿಸಿದರು.

ನಂತರ ಸುಗುಣ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಲಲಿತಾ.ಎಂ. ಬಸವನಗೌಡ ಮಾತನಾಡಿ, ‘ನಮ್ಮ ಸಂಸ್ಥೆಯು ಗ್ರಾಮಾಂತರ ಭಾಗಗಳಿಗೆ ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ’ ಎಂದು ಹೇಳಿದರು.

ಡಾ. ಶಿಲ್ಪಾ ಅವರು 150 ಜನರ ಕಣ್ಣುಗಳನ್ನು ತಪಾಸಣೆ ಮಾಡಿದರು. ಹಿರಿಯ ನಾಗರಿಕ ಸಂಘದ ಸದಸ್ಯರು ಇದ್ದರು. ನಂದಿನಿ ನರ್ಸಿಂಗ್ ಮಾಹವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ರಾಯಲ ಆಪ್ಟಿಕಲ್ಸ್‌ನ ಶ್ರೀ ವಿಠಲ ಅವರು ಗಣಕೀಕೃತ ತಪಾಸಣೆ ತಪಾಸಣೆ ನಡೆಸಿದರು.

ಬಸವಶ್ರೀ ಶಾಲೆಯ ಸ್ಕೌಟ್ಸ್ ಹಾಗೂ ಶಿಕ್ಷಕರು ಸೇವೆಯನ್ನು ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.