ರಾಯಚೂರಿನಲ್ಲಿ ಮಲೆನಾಡಿನ ಹಣ್ಣುಗಳು

7
ಹಲಸು, ಅನಾನಸ್ ಸುಗ್ಗಿಯಲ್ಲಿ ಅಗ್ಗ ದರದಲ್ಲಿ ಮಾರಾಟ

ರಾಯಚೂರಿನಲ್ಲಿ ಮಲೆನಾಡಿನ ಹಣ್ಣುಗಳು

Published:
Updated:
ರಾಯಚೂರಿನಲ್ಲಿ ಅನಾನಸ್ ಹಣ್ಣುಗಳ ಮಾರಾಟ

ರಾಯಚೂರು: ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ಅನಾನಸ್ ಮತ್ತು ಹಲಸಿನ ಹಣ್ಣುಗಳ ಮಾರಾಟ ರಾಯಚೂರಿನಲ್ಲಿ ಭರ್ಜರಿಯಾಗಿ ನಡೆದಿದೆ.

ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ಕಡೆಗೆ ಹೋಗುವ ಮಾರ್ಗದಲ್ಲಿ ಮಾರಾಟಕ್ಕೆ ಇಟ್ಟಿರುವ ಹಣ್ಣಿನ ರಾಶಿಗಳ ಮೇಲೆ ಎಲ್ಲರ ದೃಷ್ಟಿ. ನಡೆದುಕೊಂಡು ಹೋಗುವ ಜನರು, ಬೈಕ್ ಸವಾರರು, ಕಾರು, ಆಟೊಗಳಲ್ಲಿ ಸಂಚರಿಸುವ ಬಹುತೇಕ ಜನರು ಹಣ್ಣಿನ ದರ ವಿಚಾರಿಸುವುದು ಸಾಮಾನ್ಯ. ಸುಗ್ಗಿಯಲ್ಲಿ ಅಗ್ಗವಾಗಿರುವ ಹಣ್ಣುಗಳನ್ನು ಬಹಳ ಜನರು ಹಿಗ್ಗಿನಿಂದ ಖರೀದಿಸುತ್ತಿದ್ದಾರೆ. ಒಂದು ತಿಂಗಳಿಂದ ರಸ್ತೆ ಅಂಚಿನಲ್ಲಿ ಅನಾನಸ್ ಮತ್ತು ಹಲಸಿನ ಹಣ್ಣುಗಳ ಖರೀದಿಗೆ ಜನರು ಮುಗಿ ಬೀಳುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಬಡಾವಣೆಗಳಲ್ಲಿ ಹಾಗೂ ಮಾರುಕಟ್ಟೆಯಲ್ಲಿ ಚಿಲ್ಲರೆ ವಹಿವಾಟು ನಡೆಸುವ ವ್ಯಾಪಾರಿಗಳು, ಜೂಸ್ ಅಂಗಡಿಯವರು ಹಾಗೂ ಹಣ್ಣು ಕತ್ತರಿಸಿ ತುಂಡುಗಳ ಲೆಕ್ಕದಲ್ಲಿ ಮಾರಾಟ ಮಾಡುವವರು ಕೂಡಾ ಇವರಲ್ಲಿ ಖರೀದಿಸುತ್ತಿದ್ದಾರೆ. ಸಣ್ಣ ಗಾತ್ರದ ಅನಾನಸ್ ₹100 ಕ್ಕೆ ಮೂರು, ಮಧ್ಯಮ ಗಾತ್ರದ ಹಣ್ಣು ₹100 ಕ್ಕೆ ಎರಡು ಹಾಗೂ ಭಾರಿ ಗಾತ್ರದ ಅನಾನಸ್ ಹಣ್ಣು ₹70 ರಿಂದ ₹90 ದರದಲ್ಲಿ ಸಿಗುತ್ತಿದೆ.

ಉಷ್ಣತೆ ಈ ಭಾಗದಲ್ಲಿ ಹೆಚ್ಚಾಗಿರುವುದರಿಂದ ವರ್ಷದುದ್ದಕ್ಕೂ ವಿಧವಿಧವಾದ ಹಣ್ಣುಗಳ ವ್ಯಾಪಾರ ಯಥೇಚ್ಛವಾಗಿ ನಡೆಯುತ್ತದೆ. ಅನಾನಸ್ ಹಣ್ಣಿಗೆ ಸದಾ ಬೇಡಿಕೆ ಇದೆ. ಬೇಸಿಗೆಯಲ್ಲಿ ಹಣ್ಣುಗಳಿಗೆ ಬೇಡಿಕೆ ಹೆಚ್ಚಿರುತ್ತದೆ.

'ಗಿಡದಿಂದ ಬಿಡಿಸಿದ ಹಣ್ಣು ಗರಿಷ್ಠ ಐದು ದಿನ ಇರುತ್ತದೆ. ಆನಂತರ ಮೆತ್ತಗಾಗಿ ಹಾಳಾಗುತ್ತದೆ. ಹಸಿರು ವರ್ಣದಲ್ಲಿದ್ದಾಗ ಹಣ್ಣುಗಳನ್ನು ಖರೀದಿಸಿ ತರುತ್ತೇವೆ. ಶಿವಮೊಗ್ಗದಿಂದ ರಾಯಚೂರಿಗೆ ತಂದು ಕೊಡುವವರು ಬೇರೆ‌ ಯವರು ಇದ್ದಾರೆ. ನಾಲ್ಕು ದಿನಕ್ಕೆ ಮೂರು ಟನ್ ಹಣ್ಣು ಬರುತ್ತದೆ. ದಿನಕ್ಕೆ ₹5 ರಿಂದ ₹6 ಸಾವಿರ ವ್ಯಾಪಾರವಾಗುತ್ತದೆ. ಹಣ್ಣುಗಳಿಗೆ ಒಳ್ಳೆಯ ಬೇಡಿಕೆ ಇದೆ. ಇದೇ ವರ್ಷ ವ್ಯಾಪಾರ ಆರಂಭಿಸಿದ್ದೇವೆ' ಎಂದು ಅನಾನಸ್ ಮಾರಾಟ ಮಾಡುವ ಸಚಿನ್ ಸಾವಳೇಕರ್ ಮಾಹಿತಿ ನೀಡಿದರು.

'ಟನ್ ಲೆಕ್ಕದಲ್ಲಿ ಖರೀದಿಸುವಾಗ ಒಂದು ಕಿಲೋಗೆ ₹15 ಕೊಡುತ್ತೇವೆ. ಗಾತ್ರದ ಆಧಾರದಲ್ಲಿ ಮಾರಾಟ ಮಾಡುವುದರಿಂದ ಲಾಭ ಸಿಗುತ್ತದೆ. ಸದ್ಯ ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದೆ. ಶಿವಮೊಗ್ಗ ಕಡೆಗೆ ಒಳ್ಳೆಯ ಮಳೆ ಬೀಳುತ್ತಿದೆ. ಹೀಗಾಗಿ ಅನಾನಸ್ ಮತ್ತು ಹಲಸು ಹೆಚ್ಚಾಗಿ ಸಿಗುತ್ತಿದೆ. ಕ್ರಮೇಣ ದುಬಾರಿ ಆಗುತ್ತವೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಅನಾನಸ್ ಮತ್ತು ಹಲಸಿನ ಹಣ್ಣಿನ ಗಿಡಗಳ ತೋಟಗಳಿವೆ. ಅವರಿಂದ ಸಗಟು ಖರೀದಿಸಿ ತಂದು ಮಾರಾಟ ಮಾಡುತ್ತಿದ್ದೇವೆ.
- ಸಚಿನ ಸಾವಳೇಕರ್, ಹಣ್ಣು ವ್ಯಾಪಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !