ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳವಾಗಿ ಶುಭಶುಕ್ರವಾರ ಆಚರಣೆ

ಆನ್‌ಲೈನ್‌ ಮೂಲಕ ಬೋಧನೆ ಆಲಿಸಿದ ಭಕ್ತರು
Last Updated 10 ಏಪ್ರಿಲ್ 2020, 14:13 IST
ಅಕ್ಷರ ಗಾತ್ರ

ರಾಯಚೂರು: ಲಾಕ್ ಡೌನ್ ಪರಿಣಾಮದಿಂದ ಶುಭಶುಕ್ರವಾರದ ಅಂಗವಾಗಿ ಕ್ರೈಸ್ತರು ತಮ್ಮ ಮನೆಗಳಲ್ಲಿ ಆನ್‌ಲೈನ್‌ ಮೂಲಕವೇ ದೇವರ ಸಂದೇಶ ಆಲಿಸಿದರು.

ಮೆಥೋಡಿಸ್ಟ್ ಕೇಂದ್ರ ಸಭೆ ರಾಯಚೂರಿನ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಆನಂದ್ ಹೊಸೂರ, ರೆವರೆಂಡ್ ಮೂಡಲಗಿ ಯಶ್ವಂತ, ರೆವರೆಂಡ್ ಪ್ರಮೋದ್ ಸಾಮುವೆಲ್ ಅವರು ಆನ್ಲೈನ್ ಮೂಲಕ ವಾಕ್ಯ ಸಂದೇಶ ನೀಡಿದರು.
ವಾಟ್ಸ್ ಆ್ಯಪ್, ಫೇಸ್‌ಬುಕ್‌ ಲೈನ್, ಯೂ ಟ್ಯೂಬ್ ಮೂಲಕ ಕ್ರೈಸ್ತರು ಮನೆಯಲ್ಲಿಯೇ ಕುಳಿತು ದೇವರ ಸಂದೇಶ ಆಲಿಸಿದರು.

ಶುಭಶುಕ್ರವಾರದ ಅಂಗವಾಗಿ ಯೇಸು ಕ್ರಿಸ್ತನ ಜನನ, ಶ್ರಮೆ, ಮರಣ, ಪುನರುತ್ಥಾನದ ಕುರಿತು ಬೋಧನೆ ಮಾಡಿದರು. ಬೆಳಿಗ್ಗೆಯಿಂದ ಉಪವಾಸವಿದ್ದ ಭಕ್ತರು ಮೂರು ಗಂಟೆಯ ನಂತರ ಉಪಾಹಾರ ಸೇವಿಸಿದರು.

ಜಿಲ್ಲೆಯ ವಿವಿಧ ಕಡೆ ಪಾಸ್ಟರ್ ಗಳು ಮನೆಯಲ್ಲಿಯೇ ವಾಕ್ಯ ಬೋಧನೆ ವಾಟ್ಸ್ ಆ್ಯಪ್ ಮೂಲಕ ಭಕ್ತರಿಗೆ ಹಂಚಿಕೆ ಮಾಡಿದರು. ಹಲವಾರು ಭಕ್ತರು ಇದನ್ನು ಟಿವಿಗಳ ಮೂಲಕ ವೀಕ್ಷಣೆ ಮಾಡಿದರು.

ಇದಕ್ಕೂ ಮುಂಚೆ 40 ದಿನಗಳ ಕಾಲ 'ಲೆಂಟ್ ಡೇಸ್' ಎಂದು ಅನೇಕರು ಒಂದೊಂಪ್ಪತ್ತು ಮಾತ್ರ ಆಹಾರ ಸೇವಿಸಿ ದೇವರ ಧ್ಯಾನದಲ್ಲಿ ಕಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT