ಹಟ್ಟಿ ಚಿನ್ನದ ಗಣಿ: ಸಮೀಪರ ಗೌಡೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಶಿಕ್ಷಕರು ಹಾಗೂ ಮಕ್ಕಳು ಸಂಭ್ರಮದಿಂದ ಬುಧವಾರ ಆಚರಣೆ ಮಾಡಿದರು.

ಮುಖ್ಯ ಶಿಕ್ಷಕ ಬಿ.ವಿದ್ಯಾವತಿ, ಸಚೇತನ ಚಟುವಟಿಕೆ ಹಾಗೂ ಸಂಕ್ರಾಂತಿ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಡಿನ ಸಂಸ್ಕೃತಿ ಉಳಿಯಬೇಕಾದರೆ ಮುಂದಿನ ಪಿಳಿಗೆಗೆ ಹಬ್ಬಗಳ ಬಗ್ಗೆ ತಿಳುವಳಿಗೆ ಅವಶ್ಯಕ. ಮಕ್ಕಳಲ್ಲಿ ಓದಿನ ಬಗ್ಗೆ ಅಭಿರುಚಿ ಕಡಿಮೆಯಾಗದಿರಲಿ ಎಂಬ ಕಾರಣಕ್ಕೆ ಹಬ್ಬಗಳ ರೂಪದಲ್ಲಿ ಕಲಿಕೆಗೆ ಪ್ರೇರಣೆ ನೀಡಲಾಗುತ್ತಿದೆ ಎಂದರು. ಇಂದಿನ ಕಂಪ್ಯೂಟರ್ ಯುಗದಲ್ಲಿ ವಿದ್ಯೆ ಇಲ್ಲದಿದ್ದರೆ ಬಡವನಾಗುತ್ತಾನೆ ಅದಕ್ಕಾಗಿ ಮಕ್ಕಳು ಅಭ್ಯಾಸದ ಕಡೆ ಗಮನಹರಿಸಿ’ ಎಂದು ಹೇಳಿದರು.

ಕಾರ್ಯಕ್ರಮ ನಂತರ ಮಕ್ಕಳು ಹಾಗೂ ಶಿಕ್ಷಕರು ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದರು.

ಈ ವೇಳೆ ಶಿಕ್ಷಕರಾದ ಅಮೀನಾಬೇಗಂ, ಮಹಮದ್ ಫರೀದ್, ದುರ್ಗಾ, ದೀಪಾ, ಚೇತನಾ, ಶಿವಣ್ಣ ಕೋಠಾ, ಶಿಲ್ಪ, ವಿಜಯಲಕ್ಷ್ಮಿ, ಶ್ವೇತಾ, ಕವಿತಾ, ಉಪಸ್ಧಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.