ಹಟ್ಟಿ ಚಿನ್ನದ ಗಣಿ: ಇಲ್ಲಿಗೆ ಸಮೀಪದ ಪೈದೊಡ್ಡಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಭೂಮಿ ನೀಡಿದ್ದ ಮಾಲೀಕ ಭೀಮನಗೌಡ ಕಚೇರಿಗೆ ಬೀಗ ಹಾಕಿದ್ದು, ವಾಲ್ಮೀಕಿ ಭವನಕ್ಕೆ ಕಚೇರಿ ಸ್ಥಳಾಂತರ ಮಾಡಲಾಗಿದೆ.

‘1995ರಲ್ಲಿ ಗ್ರಾ.ಪಂ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಾಣದ ವೇಳೆ ನೀಡಿದ ಭರವಸೆ ಈಡೇರಿಸದ ಕಾರಣ ಬೀಗ ಹಾಕಿದ್ದೇನೆ’ ಎನ್ನುತ್ತಾರೆ ಭೂ ಮಾಲೀಕ ಭೀಮನಗೌಡ.

‘30 ವರ್ಷಗಳಿಂದ ಬಾಡಿಗೆ ಪಾವತಿಸಿಲ್ಲ. ನಮ್ಮ ಕುಟುಂಬ ಬೀದಿಗೆ ಬಂದಿದೆ. ಸಮಸ್ಯೆ ಬಗೆಹರಿಸಿ, ಇಲ್ಲ ಕಟ್ಟಡ ತೆರವು ಮಾಡಿ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದೆ. ಆದರೂ ಸ್ಪಂದಿಸಿಲ್ಲ’ ಎನ್ನುವುದು ಅವರ ಆರೋಪ.

‘ಹಲವು ವರ್ಷಗಳಿಂದ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ನನಗೆ ಅನ್ಯಾಯವಾಗಿದೆ. ನ್ಯಾಯ ಸಿಗುವವರೆಗೂ ಹೋರಾಟ ಮಾಡುವೆ’ ಎನ್ನುತ್ತಾರೆ ಅವರು.

ಗ್ರಾ.ಪಂ ಕಚೇರಿ ಯನ್ನು ತಾತ್ಕಾಲಿಕವಾಗಿ ವಾಲ್ಮೀಕಿ ಭನದಲ್ಲಿ ನಡೆಸಲಾಗುತ್ತಿದೆ. ಈ ಸ್ಥಳದಲ್ಲಿ ಸರಿಯಾಗಿ ನೆಟ್ವರ್ಕ್ ಬಾರದ ಕಾರಣ ಸಾರ್ವಜನಿಕರು ಪರದಾಡುತ್ತಿದ್ದಾರೆ. ಮೇಲಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಿ ಜನರಿಗೆ ಗ್ರಾ.ಪಂ ಸೇವೆಗಳನ್ನು ಒದಗಿಸಿಕೊಡಬೇಕು ಎಂದು ಜನರು ಒತ್ತಾಯ ಮಾಡಿದ್ದಾರೆ.

ಭೂದಾನ ಮಾಡಿದ ಕುಟುಂಬದ ಒಬ್ಬರಿಗೆ ನೌಕರಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಅದನ್ನು ಈಡೇರಿಸಿಲ್ಲ. ಅದಕ್ಕಾಗಿ ಬೀಗ ಹಾಕಿದ್ದೇನೆ. ಹೋರಾಟ ಮುಂದುವರಿಯುವುದು
ಭೀಮನಗೌಡ, ಭೂದಾನಿ

ಹೊಸದಾಗಿ ಅಧಿಕಾರ ವಹಿಸಿಕೊಂಡಿರುವೆ. ಸಮಸ್ಯೆ ಬಗ್ಗೆ ತಿಳಿದಿದೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು
ವೀರಭದ್ರಪ್ಪ, ಪಿಡಿಒ ಪೈದೊಡ್ಡಿ

ಗ್ರಾ.ಪಂಗೆ ಬೀಗ ಹಾಕಿದ್ದರಿಂದ ಜನರಿಗೆ ತೊಂದರೆಯಾಗಿದೆ. ತಾ.ಪಂ, ಜಿ.ಪಂ ಅಧಿಕಾರಿಗಳು ಗಮನಹರಿ ಸಮಸ್ಯೆ ಬಗೆಹರಿಸಲಿ
ಮುದುಕಪ್ಪ ಗುರಿಕಾರ, ಪೈದೊಡ್ಡಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.