ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಲ ಸಂಜೀವಿನಿ: ಅನುಷ್ಠಾನ ಕುರಿತು ಶಕ್ತಿನಗರದಲ್ಲಿ ಗ್ರಾಮ ಸಭೆ

Published 30 ಜೂನ್ 2024, 13:13 IST
Last Updated 30 ಜೂನ್ 2024, 13:13 IST
ಅಕ್ಷರ ಗಾತ್ರ

ಶಕ್ತಿನಗರ: ರಾಯಚೂರು ತಾಲ್ಲೂಕಿನ ಸಿಂಗನೋಡಿ ಗ್ರಾಮದ ಆಂಜೀನಯ್ಯ ದೇವಸ್ಥಾನ ಆವರಣದಲ್ಲಿ ಭಾನುವಾರ ಜಲ ಸಂಜೀವಿನಿ ಯೋಜನೆ ಅನುಷ್ಠಾನ ಮತ್ತು ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತು ಗ್ರಾಮ ಸಭೆ ಮಾಡಲಾಯಿತು.

ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಜಲ ಸಂಜೀವಿನಿ 2.0 ಯೋಜನೆ ತಾಲ್ಲೂಕಿನ ಸಿಂಗನೋಡಿ ಗ್ರಾಮ ಪಂಚಾಯತಿ ಆಯ್ಕೆಗೊಂಡಿದೆ. ರಾಜ್ಯದಲ್ಲಿ 8 ಗ್ರಾಮ ಪಂಚಾಯತಿ ಪೈಲಟ್ ಮಾದರಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ನಮ್ಮ ಸಿಂಗನೋಡಿ ಗ್ರಾಮ ಪಂಚಾಯತಿ ಆಯ್ಕೆ ಮಾಡಿದೆ.

ದಿಣ್ಣೆಯಿಂದ ತಗ್ಗು ಪ್ರದೇಶದವರೆಗೆ ಜಲ ಸಂರಕ್ಷಣ ಕಾಮಗಾರಿಗಳು, ರೈತರ ಜಮೀನುಗಳಲ್ಲಿ ವೈಯಕ್ತಿಕ ‌ಕಾಮಗಾರಿಗಳ ಸೌಲಭ್ಯ ಪಡೆಯಲು ಪಟ್ಟಿ ಮಾಡಿ ಕ್ರಿಯಾ ಯೋಜನೆ ತಯಾರಿ ಮಾಡಿ ಅನುಷ್ಠಾನ ಮಾಡಬೇಕಾಗಿದೆ. ಜಲ ಸಂಜೀವಿನಿ 2.0 ಯೋಜನೆಯನ್ನು ಗ್ರಾಮದ ವರೆಲ್ಲಾರು ಜಲ ಯೋಜನೆಯಡಿ ಕೃಷಿ, ತೋಟಗಾರಿಕೆ,‌ ಅರಣ್ಯ, ರೇಷ್ಮೆ ಇಲಾಖೆಯ ಅಧಿಕಾರಿಗಳು ಮಾತನಾಡಿ, ಗ್ರಾಮದ ರೈತರು ತಮ್ಮ ಜಮೀನುಗಳಲ್ಲಿ ಬೇಕಾದ‌ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಗ್ರಾಮಸ್ಥರಿದಂದ ಪಟ್ಟಿ ಪಡೆದುಕೊಂಡರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮನಗೌಡ, ಉಪಾಧ್ಯಕ್ಷ ಪದ್ದಮ್ಮ ರಾಮಾಂಜೀನಯ್ಯ, ಸದಸ್ಯರು, ವಿವಿಧ ಇಲಾಖೆಯ  ಅಧಿಕಾರಿಗಳು, ನರೇಗಾ ಸಿಬ್ಬಂದಿ, ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT