ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲ: ಬ್ರಿಜೇಶ ಪಾಟೀಲ

Published 20 ಏಪ್ರಿಲ್ 2024, 14:13 IST
Last Updated 20 ಏಪ್ರಿಲ್ 2024, 14:13 IST
ಅಕ್ಷರ ಗಾತ್ರ

ಸಿರವಾರ: ‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ಪ್ರತಿಯೊಂದು ಕುಟುಂಬಕ್ಕೆ ಅನುಕೂಲವಾಗಿದೆ’ ಎಂದು ಪಂಚ ಗ್ಯಾರಂಟಿ ಯೋಜನೆಯ ತಾಲ್ಲೂಕು ಘಟಕದ ಅಧ್ಯಕ್ಷ ಬ್ರಿಜೇಶ ಪಾಟೀಲ ಹೇಳಿದರು.

ತಾಲ್ಲೂಕಿನ ಮಲ್ಲಟ ಜಿ.ಪಂ. ವ್ಯಾಪ್ತಿಯ ನವಲಕಲ್ಲು, ಮರಾಟ,‌ ಮುರ್ಕಿಗುಡ್ಡ, ಹುಣಚೇಡ್, ನಾರಬಂಡ ಗ್ರಾಮಗಳಲ್ಲಿ ಪಂಚ ಗ್ಯಾರಂಟಿ ಕಾರ್ಡ್‌ಗಳನ್ನು ಶನಿವಾರ ವಿತರಿಸಿ ಮಾತನಾಡಿದರು.

‘ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಯೋಜನೆಗಳನ್ನು ಜಾರಿಗೆ ತಂದಿದ್ದು, ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಮತ ನೀಡಿ ದೇಶದಲ್ಲಿ ಗ್ಯಾರಂಟಿಗಳನ್ನು ಜಾರಿಗೆ ತರಲು ಬಹುಮತ ನೀಡಬೇಕು’ ಎಂದರು.

ಕಾಂಗ್ರೆಸ್ ಮುಖಂಡರಾದ ಶರಣಪ್ಪ ನಾಯಕ ಕೆ.ಗುಡದಿನ್ನಿ, ಎಂ.ಶ್ರೀನಿವಾಸ ಜಾಲಾಪೂರು ಕ್ಯಾಂಪ್, ದೇವೇಂದ್ರಪ್ಪ ಬೊಮ್ಮನಾಳ, ಮಲ್ಲಿಕಾರ್ಜುನ ಮಲ್ಲಟ, ಸಂದೀಪ ಗೌಡ, ರವಿ ನುಗುಡೋಣಿ ಕ್ಯಾಂಪ್, ನಾಗಪ್ಪ ಯಾದವ್, ನಾಗಪ್ಪ ನವಲಕಲ್ಲು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT