ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | '11 ಬ್ಲಾಕ್‌ ಕಾಯ್ದಿರಿಸಲು ಕೋರಿದ ಹಟ್ಟಿ ಗಣಿ ಕಂಪನಿ'

ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿಕೆ
Published 21 ಫೆಬ್ರುವರಿ 2024, 15:59 IST
Last Updated 21 ಫೆಬ್ರುವರಿ 2024, 15:59 IST
ಅಕ್ಷರ ಗಾತ್ರ

ರಾಯಚೂರು: ಹಟ್ಟಿ ಚಿನ್ನದ ಗಣಿ ಕಂಪನಿಯು ರಾಯಚೂರು ಜಿಲ್ಲೆಯಲ್ಲಿ ಒಟ್ಟು 11 ಬ್ಲಾಕ್‌ಗಳನ್ನು ಗುರುತಿಸಿ ಗಣಿಗಾರಿಕೆ ಪ್ರದೇಶವನ್ನು ಕಾಯ್ದಿರಿಸಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ.

ವಿಧಾನಸಭೆಯಲ್ಲಿ ಫೆ.20ರಂದು ಶಾಸಕಿ ಹೇಮಲತಾ ನಾಯಕರು ಕೇಳಿದ ಚುಕ್ಕಿಗುರುತಿಲ್ಲದ ಪ್ರಶ್ನೆಗೆ ಸಚವರು ಉತ್ತರ ನೀಡಿದ್ದಾರೆ.

ಹಟ್ಟಿ ಉತ್ತರ–ಪಶ್ಷಿಮ ಬ್ಲಾಕ್, ತುಪ್ಪದೂರು ಉತ್ತರ ಬ್ಲಾಕ್‌, ದಕ್ಷಿಣ ಬ್ಲಾಕ್, ಹಿರೇನಾಗನೂರು ಬ್ಲಾಕ್, ಊಟಿ ದಕ್ಷಿಣ ಬ್ಲಾಕ್, ಮಸ್ಕಿ–ಬುದ್ದಿನ್ನಿ ಬ್ಲಾಕ್, ಹೀರಾ ಬುದ್ದಿನ್ನಿ ಪೂರ್ವ್ ಬ್ಲಾಕ್, ಮಸ್ಕಿ–ಸಾನಬಾಳ್‌ ಬ್ಲಾಕ್, ರೋಡಲಬಂಡಾ–ವಂದಲಿ ಬ್ಲಾಕ್, ವಡಗಲ್‌–ಕಾಚಾಪುರ ಬ್ಲಾಕ್, ಚಿಂಚರಗಿ–ಬುಲ್ಲಾಪುರ ಬ್ಲಾಕ್‌ ಕಾಯ್ದಿರಿಸಲು ಕೋರಿದ್ದು, ಇಲಾಖೆಯ ಪರಿಶೀಲನಾ ಹಂತದಲ್ಲಿ ಇವೆ ಎಂದು ಹೇಳಿದ್ದಾರೆ.

ಚಿನ್ನದ ನಿಕ್ಷೇಪಗಳ ಗಣಿಗಾರಿಕೆ ನಡೆಸಲು ಡೆಕ್ಕನ್‌ ಎಕ್ಸ್‌ಪ್ಲೋರೇಷನ್‌, ಜಿಯೊ ಮೈಸೂರು, ಆರ್‌ಎಂಎಂಪಿಎಲ್ ಹಾಗೂ ಎಂಎಸ್‌ಪಿಎಲ್‌ ಕಂಪನಿಗಳು ಸಲ್ಲಿಸಿದ ಅರ್ಜಿಗಳು ಅನರ್ಹವಾಗಿವೆ. ಆದರೂ ಕಂಪನಿಗಳು ಖನಿಜಾನ್ವೇಷಣೆಗೆ ಮಂಜೂರು ಮಾಡಬೇಕು ಎಂದು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿವೆ ಎಂದು ಸಚಿವರು ವಿವರಿಸಿದ್ದಾರೆ.

ಹಟ್ಟಿ ಪಟ್ಟಣದ ಸಮೀಪದ ಹೀರೆನಾಗನೂರು, ರೋಡಲಬಂಡ, ವಂದಲಿ, ಊಟಿ, ಹೀರಾ ಬುದ್ದಿನಿ, ಮಸ್ಕಿ ತಾಲ್ಲೂಕಿನ ಮಸ್ಕಿ ಪಟ್ಟಣ, ಸಾನಬಾಳ, ವಟಗಲ್, ಕಾಚಾಪುರ, ಚಿಂಚರಕಿ, ಮಲ್ಲಾಪುರ ಬ್ಲಾಕ್‌ಗಳಲ್ಲಿ ಚಿನ್ನದ ನಿಕ್ಷೇಪವಿದೆ. ಮಾತ್ರವಲ್ಲ ರಾಜ್ಯದ ವಿವಿಧೆಡೆ ನಾಲ್ಕು ಚಿನ್ನದ ಬ್ಲಾಕ್‌ಗಳನ್ನು ಸಂಯುಕ್ತ ಗಣಿ ಗುತ್ತಿಗೆಗಾಗಿ ಖನಿಜ ಪ್ರದೇಶಗಳನ್ನು ಕಾಯ್ದಿರಿಸಲಾಗಿದೆ ಎಂದು ಹೇಳಿದ್ದಾರೆ.

ತುಮಕೂರು ಜಿಲ್ಲೆಯ ಅಂಜನಹಳ್ಳಿ, ಬಸವನಗೌಡ, ಚಿತ್ರದುರ್ಗ ಜಿಲ್ಲೆಯ ಬೆಳಗಟ್ಟಿ, ತಿಮ್ಮನಹಳ್ಳಿ, ಗ್ರಾಮದಲ್ಲೂ ಚಿನ್ನದ ನಿಕ್ಷೇಪ ಇದ್ದು ಚಿನ್ನದ ಗಣಿಗಾರಿಕೆಗೆ ಸಿದ್ದತೆಗಳು ನಡೆದಿವೆ ಎಂದು ಲಿಖಿತ ಉತ್ತರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT