ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಹಟ್ಟಿ ಚಿನ್ನದ ಗಣಿ: ಹೋಬಳಿ ಕೇಂದ್ರ ಮಾಡಲು ಜಿಲ್ಲಾಡಳಿತ ಹಿಂದೇಟು  

Published 4 ಜೂನ್ 2023, 15:55 IST
Last Updated 4 ಜೂನ್ 2023, 15:55 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣ ಸುತ್ತ 30ಕ್ಕೂ ಹೆಚ್ಚು ಗ್ರಾಮಗಳಿಗೆ, ವ್ಯಾಪಾರ ಕೇಂದ್ರವಾಗಿದ್ದು, ಈಗಿರುವ ಗುರುಗುಂಟಾ, ಹೋಬಳಿ ಕೇಂದ್ರವು ದೂರವಾಗುತ್ತಿದ್ದು, ಪಟ್ಟಣವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಜಿಲ್ಲಾಡಳಿ ಹಿಂದೇಟು ಹಾಕುತ್ತಿದೆ.

2017ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಧೀನ ಜಿಲ್ಲಾಧಿಕಾರಿಗಳಿಗೆ ಹೋಸ ಹೋಬಳಿ ರಚನೆಗೆ ಇರುವ ನಿಯಮ ಮಾನದಂಡಗಳ ಪ್ರಕಾರ ವರದಿ ನೀಡುವಂತೆ ಪತ್ರ ಬರೆದಿದ್ದರು, 6 ವರ್ಷ ಕಳೆದರು ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದಕ್ಕೆ ಈಗಿನ ಶಾಸಕರು ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುವುದು ಇಲ್ಲಿನ ಜನರ ಒತ್ತಾಯ.

ಪಟ್ಣವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವ ಬಗ್ಗೆ ಕಾಂಗ್ರೆಸ್ ಮುಖಂಡ ಮೌಲಸಬ್ 2016ರಲ್ಲಿ ಅಂದಿನ ಉಸ್ತುವಾರಿ ಸಚಿವರಾಗಿದ್ದ ತನ್ವೀರ್ ಶೇಠ್ ಹಾಗೂ ಅಂದಿನ ಕಂದಾಯ ಮಂತ್ರಿ ತಿಮ್ಮಪ್ಪನವರಿಗೆ ಪತ್ರ ಬರೆದಿದ್ದರು.

ತನ್ವೀರ್ ಶೇಠ್ ಮನವಿ ಮೇರಗೆ ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರ ಮಾಡಲು ನಿರ್ಧರಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕಂದಾಯ ಸಚಿವರಿಗೆ ಪತ್ರ ಬರೆದರೂ  ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

ರೋಡಲಬಂಡ (ತ), ಕಡ್ಡೋಣಿ, ಮೇಧಿನಾಪುರ,ಕೋಠಾ, ವೀರಪುರ, ಗೆಜ್ಜಲಟ್ಟಾ, ಚಿಕ್ಕಹೆಸರೂರು, ಚಿಕ್ಕನಗನೂರು, ಆನ್ವರಿ, ಗುಡುದನಾಳ, ಹೋಸುರು, ಚುಕನಟ್ಟಿ, ಸೇರಿದಂತೆ ವಿವಿದ ಗ್ರಾಮಗಳನ್ನು ಜನಸಂಖ್ಯೆ ಬೌಗೋಳಿಕ, ಕ್ಷೇತ್ರದ ಮೂಲಕ ಹೋಸ ಹೋಬಳಿ ಕೇಂದ್ರಕ್ಕೆ ಒಳಗಾಗಬಹುದು ಎಂದು ಗ್ರಾಮಗಳ ವರದಿ ನೀಡಲಾಗಿತ್ತು.

ಅಧಿಕಾರಿಗಳು ಮೇಲಿಂದ ಮೇಲೆ ಮನವಿ ಪತ್ರ ನೀಡಿದರು, 27-10-2016 ರಂದು ಅಂದಿನ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಯಚೂರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. 

ಹೋಬಳಿ ರಚನೆಗೆ ಇರುವ ಮಾನದಂಡ, ಪ್ರಯೋಜನಗಳ ಬಗ್ಗೆ, ವೆಚ್ಚ ವಿವಿರಗಳನ್ನು ಪ್ರಸ್ತಾಪಿಸಿ, ಹೊಸ ಕಚೇರಿಗಳ ಆರಂಭಕ್ಕೆ ಜಮೀನಿನ ವಿವರ, ಜನಸಂಖ್ಯೆ, ಗ್ರಾಮಗಳ ವಿವಿರ, ಮೂಲ ಮತ್ತು ಪ್ರಸ್ತಾಪಿತ ಹೋಬಳಿಗಳ ಬೌಗೋಳಿಕತ್ವ ವಿಸ್ತಿರ್ಣದೊಂದಿಗೆ ಮಾಹಿತಿ ಸಲ್ಲಿಸುವಂತೆ ಸೂಚಿಸಿದ್ದರು.

ಪಟ್ಟಣವನ್ನು ಹೋಬಳಿ ಕೇಂದ್ರ ಮಾಡಲು ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಲು ಹಿಂದೇಟು ಹಾಕುತ್ತಿದೆ. ಜನ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪಟ್ಟಣ ಹಿಂದುಳಿದಿದೆ ಎನ್ನುವುದು ಜನರ ಮಾತು.

ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರಮಾಡುವುದು ಜನರ ಬೇಡಿಕೆಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕ್ರಮ ಕೈಗೊಳ್ಳಲಾಗುವುದು.

- ಮಾನಪ್ಪ ವಜ್ಜಲ್ ಶಾಸಕ ಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT