ಸರ್ಕಾರದ ನಿಯಮಾನುಸಾರದ ಪ್ರಕಾರ ಒಬ್ಬ ರೈತ ಬೆಳೆದ ಜೋಳ ಖರೀದಿ ಮಾಡಬೇಕಾದರೆ ಪಹಣಿ, ಆಧಾರ್, ಬ್ಯಾಂಕ್ ಪಾಸ್‍ಬುಕ್ ದಾಖಲಾತಿಗಳು ಬೇಕು. ಸಿಂಧನೂರು ತಾಲ್ಲೂಕಿನಲ್ಲಿ 7 ಲಕ್ಷ ಕ್ವಿಂಟಲ್‍ಗೂ ಹೆಚ್ಚು ಜೋಳ ಖರೀದಿಯಾಗಿದೆ ಎಂದು ವರದಿಯಿದೆ. ತಾಲ್ಲೂಕಿನಲ್ಲಿ ಶೇ 70ರಷ್ಟು ಭತ್ತ, ಶೇ 30ರಷ್ಟು ಮಾತ್ರ ಜೋಳ ಬೆಳೆಯುತ್ತಾರೆ. ಆದರೆ ತಾಲ್ಲೂಕಿನಲ್ಲಿ 7 ಲಕ್ಷ ಕ್ವಿಂಟಲ್ ಜೋಳ ಎಲ್ಲಿಂದ ಬಂದಿದೆ. ಈ ಕುರಿತು ಸಮಗ್ರ ತನಿಖೆ ಮಾಡಬೇಕು. ತೂಕದಲ್ಲಿಯೂ ವ್ಯತ್ಯಾಸ ಕಂಡು ಬಂದಿದೆ. ಈ ಭ್ರಷ್ಟಾಚಾರದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.