ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಕಾನೂನುಗಳಿಗೆ ಧಕ್ಕೆ: ಡಿ.ಎಚ್.ಪೂಜಾರ

Last Updated 2 ಮೇ 2022, 2:42 IST
ಅಕ್ಷರ ಗಾತ್ರ

ಸಿಂಧನೂರು: ಅಮೆರಿಕಾದ ಚಿಕಾಗೊ ನಗರದಲ್ಲಿನ ಮಹಿಳಾ ಕಾರ್ಮಿಕರ ತ್ಯಾಗದ ಸಂಕೇತವೇ ‘ಮೇ ದಿನ’ (ಮೇ ಡೇ) ಉದ್ದೇಶವಾಗಿದೆ ಎಂದು ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ ಹೇಳಿದರು.

ಶ್ರಮಜೀವಿ ಎಪಿಎಂಸಿ ಹಮಾಲರ ಸಂಘದ ಕಾರ್ಯಾಲಯದಲ್ಲಿ ಭಾನು ವಾರ ನಡೆದ ಮೇ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತ್ಯಾಗ ಮತ್ತು ಬಲಿದಾನಗಳ ಮೂಲಕ ಪಡೆದ ಕಾರ್ಮಿಕರ ಕಾನೂನುಗಳಿಗೆ ಸರ್ಕಾರಗಳಿಂದ ಧಕ್ಕೆ ಆಗುತ್ತಿದೆ. ಕಾರ್ಮಿಕರು ಮರಳಿ ತಮ್ಮ ಹಕ್ಕು ಪಡೆಯಲು ಮತ್ತೆ ಚಳವಳಿಯ ದಾರಿ ಹಿಡಿಯಬೇಕಾಗಿದೆ ಎಂದರು.

ಪ್ರಗತಿಪರ ಮುಖಂಡ ಎಚ್.ಎನ್.ಬಡಿಗೇರ್ ಮಾತನಾಡಿ, ಸಮಾಜದ ಸಮಾನತೆಗೆ ಆಳುವ ವರ್ಗದ ಸರ್ಕಾ ರಗಳು ಕಂಟಕಪ್ರಾಯವಾಗಿವೆ ಎಂದು ಹೇಳಿದರು.

ದಲಿತ ಹಿಂದುಳಿದ ಅಲ್ಪಸಂಖ್ಯಾತ ಪ್ರಗತಿಪರ ಒಕ್ಕೂಟದ ಪ್ರಧಾನ ಸಂಚಾಲಕ ಜೆ.ರಾಯಪ್ಪ, ಸಂಘದ ಗೌರವಾಧ್ಯಕ್ಷ ಎಂ.ಗಂಗಾಧರ ಮಾತನಾಡಿದರು.

ಸಂಘದ ಕಾರ್ಯದರ್ಶಿ ಎಚ್.ಆರ್ ಹೊಸಮನಿ, ನಾಗಪ್ಪ ಉಮಲೂಟಿ, ತಿಮ್ಮಣ್ಣ ಯಾದವ್ ಯಲ್ಲಪ್ಪ ಗೋಮರ್ಸಿ, ಮುದಿಯಪ್ಪ, ಪರಸಪ್ಪ, ಬಸವರಾಜ, ಇದ್ದರು.

ಸಂಘದ ಅಧ್ಯಕ್ಷ ಮಾಬುಸಾಬ ಬೆಳ್ಳಟ್ಟಿ ಧ್ವಜಾರೋಹಣ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT