ರಸ್ತೆ ಮುಚ್ಚಲು ಗುತ್ತಿಗೆದಾರರಿಗೆ ಸೂಚಿಸುವೆ
‘ಜಲಧಾರೆ ಯೋಜನೆ ಪೈಪ್ ಅಳವಡಿಸುವ ಕಾರ್ಯ ಮುಗಿದ ನಂತರ ಗಟ್ಟಿಯಾಗಿ ಮುಚ್ಚಬೇಕು. ಈ ಬಗ್ಗೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಇಇ ಪರಮೇಶ್ವರ ಟೆಂಗಳಿಕರ್ಮ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕಾಮಗಾರಿಯಿಂದಾಗಿ ರಸ್ತೆ ಹಾಳಾದರೂ ದುರಸ್ತಿ ಮಾಡಲು ಟೆಂಡರ್‌ನಲ್ಲಿ ನಿಯಮ ಇದೆ. ಅದನ್ನು ಮಾಡಿಸಲಾಗುತ್ತಿದೆ’ ಅವರು ತಿಳಿಸಿದರು.