ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಗುರುಗುಂಟಾ ಅಮರೇಶ್ವರ ರಥೋತ್ಸವ ಇಂದು

ಅಕ್ಷರ ಗಾತ್ರ

ಲಿಂಗಸುಗೂರು: ಉತ್ತರ ಕರ್ನಾಟಕದ ಐತಿಹಾಸಿಕ ಪ್ರಸಿದ್ಧ ದೇವಾಲಯಗಳಲ್ಲಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ಗುರುಗುಂಟಾ ಅಮರೇಶ್ವರ ದೇವಸ್ಥಾನವೂ ಒಂದು. ಸಹಸ್ರಾರು ಭಕ್ತರ ಮನದಲ್ಲಿ ನೆಲೆಗೊಂಡ ಅಮರೇಶ್ವರ ದೇವರ ಜಾತ್ರೆ ನಿಮಿತ್ತ ಇಂದು (ಸೋಮವಾರ) ಸಂಜೆ 6ಗಂಟೆಗೆ ರಥೋತ್ಸವ ಜರುಗಲಿದೆ.

ಸಾಂಪ್ರದಾಯಿಕವಾಗಿ ಹೋಳಿ ಹುಣ್ಣಿಮೆಯ ಒಂದು ವಾರ ಮುಂಚೆಯಿಂದ ಜಾತ್ರಾಮಹೋತ್ಸವದ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಹೋಳಿ ಹುಣ್ಣಿಮೆ ದಿನ ಅಮರೇಶ್ವರ ದೇವಸ್ಥಾನಕ್ಕೆ ಅಭಿನವ ಗಜದಂಡ ಶಿವಾಚಾರ್ಯರು ಮತ್ತು ಕಳಸದ ಪ್ರವೇಶ ಆಗುತ್ತಿದ್ದಂತೆ ಜಾತ್ರೆ ವಿಧಿ ವಿಧಾನಗಳು, ಪೂಜಾ ಕೈಂಕರ್ಯಗಳಿಗೆ ವಿದ್ಯುಕ್ತ ಚಾಲನೆ ದೊರೆಯುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಭಕ್ತರಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಮದುವೆ ಇತರೆ ಸಮಾರಂಭಗಳಿಗೆ ಕಲ್ಯಾಣ ಮಂಟಪಗಳು, ಸ್ನಾನಗೃಹ, ವಾಣಿಜ್ಯ ಮಳಿಗೆ, ಕುಡಿಯುವ ನೀರಿನ ವ್ಯವಸ್ಥೆ, ಸಾರಿಗೆ ಹಾಗೂ ವಿದ್ಯುತ್‌ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ನಿತ್ಯ ದಾಸೋಹ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ದೇವಸ್ಥಾನ ಸಮಿತಿ ಮುತುವರ್ಜಿ ವಹಿಸುತ್ತ ಬಂದಿದೆ.

‘ಹೆಚ್ಚುವರಿ ತಾತ್ಕಾಲಿಕ ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ, ದೀಪಾಲಂಕಾರ. ದೇವಸ್ಥಾನ ಆವರಣದಲ್ಲಿ ಕಳ್ಳತನ, ಸಮಾಜ ವಿರೋಧಿ ಕೃತ್ಯ ಜರುಗದಂತೆ ಎಚ್ಚರಿಕೆ ವಹಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಹಟ್ಟಿ ಚಿನ್ನದ ಗಣಿ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ರಾಜಾ ಸೋಮನಾಥ ನಾಯಕ ತಿಳಿಸಿದರು.

‘ಹೋಳಿ ಹುಣ್ಣಿಮೆ ದಿನವಾದ ಮಾ. 9ರಂದು ಸಂಜೆ 6ಕ್ಕೆ ರಥೋತ್ಸವ ಜರುಗಲಿದೆ. ಕೃಷಿಕರ ಜಾತ್ರೆ ಎಂದೆ ಬಿಂಬಿತಗೊಂಡ ಈ ಜಾತ್ರೆಯು 15 ದಿನಗಳ ಕಾಲ ಜರುಗಲಿದ್ದು ಜಾನುವಾರು ಬಜಾರ, ಕೃಷಿ ಪರಿಕರ, ಬಟ್ಟೆ, ಕಿರಾಣಿ, ಬಳೆ, ಮಿಠಾಯಿ, ಹೋಟೆಲ್‌, ಬಾಂಡೆ, ಆಡುಗೆ ಸಾಮಗ್ರಿ ಸೇರಿದಂತೆ ಇತರೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿದೆ’ ಎಂದು ಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ ವಿವರಿಸುತ್ತಾರೆ.

‘ಜಾತ್ರೆ ವೇಳೆಯಲ್ಲಿ ಅಗತ್ಯತೆಗೆ ತಕ್ಕಷ್ಟು ಪೊಲೀಸ್‌ ಹಾಗೂ ಗೃಹ ರಕ್ಷಕ ಸಿಬ್ಬಂದಿ ಬಳಿಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭಕ್ತರು ಬೆಲೆ ಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಮಾಜ ವಿರೋಧಿ ಕೃತ್ಯಗಳ ಮಾಹಿತಿ ನೀಡಿ ಸಹಕಾರ ನೀಡಲು ಡಿವೈಎಸ್ಪಿ ಎಸ್‌.ಎಸ್‌. ಹುಲ್ಲೂರು ನೇತೃತ್ವ ತಂಡ ಸಿದ್ಧತೆ ಮಾಡಿಕೊಂಡಿದೆ’ ಎಂದು ತಹಶೀಲ್ದಾರ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT