ಗುರುವಾರ , ಮಾರ್ಚ್ 30, 2023
32 °C

‘ಕನ್ನಡದ ಭಾಷೆ ಬಗ್ಗೆ ಕೀಳರಿಮೆ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಟ್ಟಿಚಿನ್ನದಗಣಿ: ‘ಕನ್ನಡ ಭಾಷೆ ಕುರಿತು ಕೀಳರಿಮೆ ಬೇಡ. ಕನ್ನಡ ನಾಡು–ನುಡಿಗೆ ತನ್ನದೆ ಆದ ಇತಿಹಾಸ ಇದೆ’ ಎಂದು ಗಣಿ ಕಂಪನಿಯ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಬಹದ್ದೂರ್ ಹೇಳಿದರು.

ಹಟ್ಟಿಗಣಿ ಕಂಪನಿ ವತಿಯಿಂದ ಧಾರುವಾಲ ಕ್ರೀಡಾಂಗಣದ ಬಳಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಕನ್ನಡ ಭಾಷೆ ಬೆಳೆಯಬೇಕಾದರೆ ಪಾಲಕರು ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು. ಕನ್ನಡ ಭಾಷಾ ಸಂರಕ್ಷಣೆಗೆ ಶ್ರಮಿಸುವುದು ಎಲ್ಲರ ಕರ್ತವ್ಯ. ಕಂಪನಿ ಆಡಳಿತದಲ್ಲಿ ಕನ್ನಡ ಬಳಕೆ ಮಾಡಬೇಕು ಎಂದು ಆದೇಶ ನೀಡಲಾಗಿದೆ’ ಎಂದರು.

ತಾಂತ್ರಿಕ ವಿಭಾಗದ ಅಧಿಕಾರಿ ರವಿಕುಮಾರ ಹಾಗೂ ಶಿಕ್ಷಕ ನರಸಪ್ಪ ಯಾದವ ಮಾತನಾಡಿದರು.

ಅಧಿಕಾರಿಗಳಾದ ಸೈಹಿಫ್ ಉಲ್ಲಾಖಾನ್, ಎ.ಬಿ. ಲಮಾಣಿ, ಎಚ್‌.ವಿಶ್ವನಾಥ ನಾಯಕ, ಜಗನ್ ಮೋಹನ್, ಸುರೇಶ, ವೈದ್ಯರಾದ ರವಿಂದ್ರ ಮಾವಿನಕಟ್ಟಿ, ಶಂಶುದ್ದಿನ್, ಸಿಬ್ಬಂದಿಗಳಾದ ಮೈಬು, ರಂಗನಾಥ, ಸೇರಿದಂತೆ ಇತರರು ಇದ್ದರು.

ಬಾಬುಸಾಗರ್ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.