ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ | ಶೌಚಾಲಯಗಳ ದುಸ್ಥಿತಿ: ಮಕ್ಕಳಿಗೆ ಬಯಲೇ ಗತಿ

ವಟಗಲ್ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Published 18 ನವೆಂಬರ್ 2023, 6:53 IST
Last Updated 18 ನವೆಂಬರ್ 2023, 6:53 IST
ಅಕ್ಷರ ಗಾತ್ರ

ಕವಿತಾಳ: ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ಈ ಶಾಲೆ 1ನೇ ತರಗತಿಯಿಂದ 8ನೇ ತರಗತಿಯವರೆಗೆ 102 ಬಾಲಕರು ಮತ್ತು 114 ಬಾಲಕಿಯರ ದಾಖಲಾತಿ ಹೊಂದಿದೆ. ಈ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇದ್ದೂ, ಇಲ್ಲದಂತಾಗಿದ್ದು ಮಕ್ಕಳಿಗೆ ಬಯಲು ಶೌಚಾಲಯವೇ ಗತಿಯಾಗಿದೆ.

ಗ್ರಾಮದ ಹಳೆ ಶಾಲಾ ಆವರಣದಲ್ಲಿನ 6 ಶೌಚಾಲಯಗಳ ಪೈಕಿ ಎರಡು ಶೌಚಾಲಯಗಳನ್ನು ಶಿಕ್ಷಕರು ಬಳಕೆ ಮಾಡುತ್ತಾರೆ. ಚುನಾವಣೆ ಸಂದರ್ಭ ತರಾತುರಿಯಲ್ಲಿ ನಿರ್ಮಿಸಿದ ಉಳಿದ ನಾಲ್ಕು ಶೌಚಾಲಯಗಳು ಹಾಳಾಗಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಶಿಕ್ಷಕರ ಕೊಠಡಿಯ ಕಿಟಕಿಯಲ್ಲಿ ಶೌಚಾಲಯದ ಬಾಗಿಲು ಕಾಣುವುದರಿಂದ ಮಕ್ಕಳು ಶೌಚಾಲಯ ಬಳಸಲು ನಾಚಿಕೆಪಡುತ್ತಿದ್ದಾರೆ. 1 ರಿಂದ 3ನೇ ತರಗತಿವರೆಗೆ ಇಲ್ಲಿ ತರಗತಿಗಳು ನಡೆಯುತ್ತಿದ್ದು ಮಕ್ಕಳು ಮೂತ್ರ ವಿಸರ್ಜನೆಗೆ ಬಯಲು ಪ್ರದೇಶ ಅವಲಂಬಿಸಿದ್ದಾರೆ. ಬಹಿರ್ದೆಸೆಗೆ ಮನೆಗೆ ಹೋಗಬೇಕಿದೆ.

ಊರ ಹೊರಗಿನ ಹೊಸ ಶಾಲಾ ಕಟ್ಟಡದಲ್ಲಿ 4ನೇ ತರಗತಿಯಿಂದ 8ನೇ ತರಗತಿವರೆಗೆ ತರಗತಿಗಳು ನಡೆಯುತ್ತಿದ್ದು, ಅಲ್ಲಿ ನೀರು ಪೂರೈಕೆ ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲದೆ ಮಕ್ಕಳು ಬಯಲಿನಲ್ಲಿ ನಿಸರ್ಗದ ಕರೆಗೆ ಓಗೊಡುವಂತಾಗಿದೆ.

ಕವಿತಾಳ ಸಮೀಪದ ವಟಗಲ್ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಹಳೇ ಕಟ್ಟಡ
ಕವಿತಾಳ ಸಮೀಪದ ವಟಗಲ್ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ಹಳೇ ಕಟ್ಟಡ

ಗ್ರಾಮದಲ್ಲಿನ ಹಳೆ ಶಾಲೆ ಆವರಣದಲ್ಲಿನ ಏಳು ಕೊಠಡಿಗಳಲ್ಲಿ ಮೂರು ಕೊಠಡಿಗಳು ಬಹುತೇಕ ಶಿಥಿಲಗೊಂಡಿವೆ. ಎರಡು ಕೊಠಡಿಗಳಲ್ಲಿ ತಗರತಿಗಳು, ಒಂದು ಶಿಕ್ಷಕರ ಬಳಕೆಗೆ ಹಾಗೂ ಮತ್ತೊಂದರಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದೆ.

ಗ್ರಾಮದಲ್ಲಿನ ಹಳೆ ಶಾಲೆಯಲ್ಲಿಯೇ ಬಿಸಿಯೂಟ ತಯಾರಿಸುವುದರಿಂದ ಊರ ಹೊರಗಿನ ಹೊಸ ಶಾಲೆಯಿಂದ ಮಕ್ಕಳು ಮುಖ್ಯರಸ್ತೆ ದಾಟಿಕೊಂಡು ಮಧ್ಯಾಹ್ನ ಬಿಸಿಯೂಟಕ್ಕೆ ಅಲ್ಲಿಗೆ ಹೋಗುತ್ತಾರೆ.

ಕವಿತಾಳ ಸಮೀಪದ ವಟಗಲ್ ಗ್ರಾಮದ ಊರ ಹೊರಗಿನ ಹೊಸ ಶಾಲಾ ಕಟ್ಟಡ
ಕವಿತಾಳ ಸಮೀಪದ ವಟಗಲ್ ಗ್ರಾಮದ ಊರ ಹೊರಗಿನ ಹೊಸ ಶಾಲಾ ಕಟ್ಟಡ
ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಬಾಲಕಿಯರು ಮುಜುಗರ ಪಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.
- ಭೀಮಣ್ಣ ನಾಯಕ ವಟಗಲ್ ಪಾಲಕ
ಶೌಚಾಲಯಗಳು ಸರಿಯಿಲ್ಲದ ಕಾರಣ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಎಸ್‌ಡಿಎಂಸಿ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
- ಪುಷ್ಪಾ ಪತ್ತಾರ್ ಮುಖ್ಯ ಶಿಕ್ಷಕಿ
ಶೌಚಾಲಯ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಗಮನಕ್ಕೆ ತರಲಾಗಿದೆ. ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಶಿವಕುಮಾರ ಪಾಟೀಲ, ಅಧ್ಯಕ್ಷ ನೇತಾಜಿ ಸುಭಾಶ್ಚಂದ್ರ ಭೋಸ್ ಯುವಕ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT