ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ವಿವಿಧ ಹಳ್ಳಿ-ಕ್ಯಾಂಪ್‍ಗಳಲ್ಲಿ ಬಿಜೆಪಿ-ಜೆಡಿಎಸ್ ಭರ್ಜರಿ ಪ್ರಚಾರ

Published 2 ಮೇ 2024, 13:55 IST
Last Updated 2 ಮೇ 2024, 13:55 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ವಿವಿಧ ಹಳ್ಳಿ ಮತ್ತು ಕ್ಯಾಂಪ್‍ಗಳಲ್ಲಿ ಗುರುವಾರ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಭರ್ಜರಿ ಪ್ರಚಾರ, ರೋಡ್‍ಶೋ ನಡೆಸಿ ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಪರ ಮತಯಾಚನೆ ಮಾಡಿದರು.

ನಗರದ ರಾಮಕಿಶೋರ ಕಾಲೊನಿಯ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ತಾಲ್ಲೂಕಿನ ಶ್ರೀಪುರಂಜಂಕ್ಷನ್, ಸಾಸಲಮರಿ ಕ್ಯಾಂಪ್, ಮಲ್ಕಾಪುರ ಕ್ಯಾಂಪ್, ಬೂದಿವಾಳ ಕ್ಯಾಂಪ್, ಸೋಮಲಾಪುರ, ಸಾಲಗುಂದಾದಲ್ಲಿ ತೆರೆದ ವಾಹನದಲ್ಲಿ ರೋಡ್‍ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಅವರಿಗೆ ಮತ ಹಾಕಿ ಗೆಲ್ಲಿಸುವಂತೆ ಮನವಿ ಮಾಡಿದರು.

ನಂತರ ಸಿದ್ಧಪರ್ವತ ಅಂಬಾಮಠದ ಅಂಬಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ತದನಂತರ ರೌಡಕುಂದಾ, ರಾಮಾಕ್ಯಾಂಪ್, ಬಂಗಾರಿ ಕ್ಯಾಂಪ್, ಹಂಚಿನಾಳ, ಬಸಾಪುರ, ದುರ್ಗಾಕ್ಯಾಂಪ್ ಹಾಗೂ ಜಾಲಿಹಾಳ ಮಹಾಶಕ್ತಿ ಕೇಂದ್ರದ ಗ್ರಾಮಗಳಾದ ವೆಂಕಟೇಶ್ವರ ಕ್ಯಾಂಪ್, ತಾಯಮ್ಮ ಕ್ಯಾಂಪ್, ಗಾಂಧಿನಗರ ಗ್ರಾಮಗಳಲ್ಲಿ ಡಾ.ಬಸವರಾಜ ಕ್ಯಾವಟರ್ ಪರವಾಗಿ ಪ್ರಚಾರ ನಡೆಸಿ ಮತಯಾಚಿಸಲಾಯಿತು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ಅಮರೇಗೌಡ ವಿರೂಪಾಪುರ, ಎಂ.ದೊಡ್ಡಬಸವರಾಜ, ಮಧ್ವರಾಜ್ ಆಚಾರ್, ಬಿ.ಶ್ರೀಹರ್ಷ, ವೆಂಕೋಬ ನಾಯಕ ರಾಮತ್ನಾಳ, ಮಲ್ಲಿಕಾರ್ಜುನ ಜೀನೂರು, ಹನುಮೇಶ ಕುರಕುಂದಿ, ಪರಮೇಶಪ್ಪ ದಢೇಸುಗೂರು, ವೆಂಕನಗೌಡ ಮಲ್ಕಾಪುರ, ತಿಮ್ಮಾರೆಡ್ಡಿ ಹುಡಾ, ರಾಮಚಂದ್ರರಾವ್, ಪದ್ಮನಾಯ್ಡು, ಬಾಲಕೃಷ್ಣ, ವಂಶಿ, ಸಿದ್ದು ಹೂಗಾರ, ಮಲ್ಲಿಕಾರ್ಜುನ ಕಾಟಗಲ್, ಜಡಿಯಪ್ಪ ಹೂಗಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT