ಹಟ್ಟಿ ಚಿನ್ನದ ಗಣಿ: ಮಧ್ವನವಮಿ ಅಂಗವಾಗಿ ಇಲ್ಲಿಗೆ ಸಮೀಪದ ವಂದಲಿಯ ಬಲಭೀಮ ದೇವಸ್ಥಾನದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೆಳಗಿನ ಜಾವ 4ಕ್ಕೆ ಮಧು ಹಾಗೂ ಪಂಚಾಮೃತ ಅಭಿಷೇಕ, ಎಲೆ ಪೂಜೆ, ಬೆಳ್ಳಿ ಕವಚ ಸಹಿತ ಅಲಂಕಾರ ನೆರವೇರಿಸಲಾಯಿತು. ಬೆಳಿಗ್ಗೆ 10ಕ್ಕೆ ಕಣ್ವ ಮಠದ ಪೀಠಾಧಿಪತಿ ವಿದ್ಯಾಕಣ್ವ ವಿರಾಜ ತೀರ್ಥರ ಶೋಭಾ ಯಾತ್ರೆ ನಡೆಯಿತು.

ಹನುಮ, ಭೀಮ, ಮಧ್ವಾಂತರ್ಗತ ವಿಠ್ಠಲ ಕೃಷ್ಣನ ಸಂಸ್ಥಾನ ಪೂಜೆ, ಮುದ್ರಾಧಾರಣೆ ನಡೆಯಿತು.

ಭಜನಾ ಮಂಡಳಿಯೊಂದಿಗೆ ರಥೋತ್ಸವ, ಸತ್ಯನಾರಾಯಣ ಪೂಜೆ, ಮಧ್ಯಾಹ್ನ 2 ಗಂಟೆಯಿಂದ ಮಹಾ ನೈವೇದ್ಯ, ಮಹಾ ಮಂಗಳಾರತಿ, ತೀರ್ಥ-ಪ್ರಸಾದ ಕಾರ್ಯಕ್ರಮ ನಡೆಯಿತು.

ಮಾಧವಾಚಾರ್ಯ ಜೋಷಿ ಶಿರಗುಂಪಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

ಹಟ್ಟಿ, ಲಿಂಗಸುಗೂರು, ದೇವದುರ್ಗ, ರಾಯಚೂರು ಸೇರಿ ವಿವಿಧೆಡೆಯ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.