ಕವಿತಾಳ: ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳ ಜತೆ ಸಾಮಾಜಿಕ ಜಾವಾಬ್ದಾರಿಯನ್ನು ನಿರ್ವಹಿಸುತ್ತಿರುವ ಮಲ್ಲದಗುಡ್ಡ ಗ್ರಾಮದ ಆರೂಢ ಮಠ ಅಪಾರ ಭಕ್ತ ಸಮೂಹವನ್ನು ಹೊಂದಿದೆ. ನಾಲ್ಕು ದಶಕಗಳಿಂದ ಪ್ರತಿ ವರ್ಷ ಉಚಿತವಾಗಿ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸುವ ಮೂಲಕ ಈ ಭಾಗದ ಬಡ ಕುಟುಂಬಗಳಿಗೆ ಆಸರೆಯಾಗಿದೆ.

ಆರೂಢ ಅಯ್ಯಪ್ಪ ತಾತನವರ 43ನೇ ಮತ್ತು ಆರೂಢ ಕರಿಬಸ್ಸಯ್ಯ ತಾತನವರ 9ನೇ ಪುಣ್ಯ ಸ್ಮರಣೆ ಅಂಗವಾಗಿ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಮಂಗಳವಾರ ಉಚಿತ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸಲಾಗಿದೆ.

ಸಮಾರಂಭದ ಅಂಗವಾಗಿ ಜೋಡು ಪಲ್ಲಕ್ಕಿ ಕಳಸಾರೋಹಣ, ನಂದಿಕೋಲು ಸೇವೆ, ಪುರವಂತಿಕೆ ಸೇವೆ, ಜೋಡು ಪಲ್ಲಕ್ಕಿ ಉತ್ಸವ, ಧರ್ಮಸಭೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಮತ್ತು ತುಲಾಭಾರ ನಡೆಯಲಿದೆ.

ಚನ್ನಬಸವೇಶ್ವರ ಗಲಗಮಠದ ಗಂಗಾಧರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ನಂದಿಹಾಳ ಕೊಡೇಕಲ್ ಮಠದ ಸಂಗಯ್ಯ ಸ್ವಾಮಿ, ಯರಮರಸ್ ನ ಕಲಿಗಣನಾಥ ಸ್ವಾಮಿ ಮತ್ತು ದೇವರಭೂಪುರದ ಗಂಗಾಧರ ಸ್ವಾಮೀ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಭಕ್ತರ ಸಹಕಾರದಿಂದ ಕಳೆದ 43 ವರ್ಷಗಳಿಂದ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತಿವೆ, ಕರಿಬಸ್ಸಯ್ಯ ತಾತನವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮಠವನ್ನು ಮುನ್ನಡೆಸಲಾಗುತ್ತಿದೆ. ಕೆಲವು ವರ್ಷಗಳ ಹಿಂದೆ 250 ಜೋಡಿ ವಿವಾಹ ನೆರವೇರಿಸಿದ ಕೀರ್ತಿ ಮಠಕ್ಕಿದೆʼ ಎಂದು ಮಠದ ಪ್ರಸ್ತುತ ಪೀಠಾಧಿಪತಿ ಆರೂಢ ಅಯ್ಯಪ್ಪ ತಾತ ತಿಳಿಸಿದರು.

ಮಠದ ಕಾರ್ಯಕ್ರಮಗಳಲ್ಲಿ ಎಲ್ಲಾ ಜಾತಿ ಜನಾಂಗದ ಭಕ್ತರು ಪಾಲ್ಗೊಳ್ಳುತ್ತಾರೆ ಅನ್ಯ ಜಿಲ್ಲೆಗಳಿಂದ ಭಕ್ತರು ಆಗಮಿಸಲಿದ್ದಾರೆ
ಆರೂಢ ಅಯ್ಯಪ್ಪ ತಾತ ಮಠದ ಪೀಠಾಧಿಪತಿ

ಭಕ್ತರ ಅಶೋತ್ತರಗಳಿಗೆ ಸ್ಪಂದಿಸುವುದರ ಜತೆ ಭಕ್ತರನ್ನು ಜ್ಞಾನ ಮಾರ್ಗದಲ್ಲಿ ನಡೆಸುವ ಆರೂಢ ಮಠದ ಪರಂಪರೆಗೆ ಇತಿಹಾಸವೇ ಇದೆ
ಶರಣಪ್ಪಗೌಡ ಯದ್ದಲದಿನ್ನಿ ಭಕ್ತ

ಅಧೈತ ಸಿದ್ದಾಂತ ಮತ್ತು ಕೊಡೆಕಲ್ ಬಸವಣ್ಣವರ ಅನುಯಾಯಿ ಲಿಂ.ಕರಿಬಸ್ಸಯ್ಯ ತಾತನವರು ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ
ಎನ್. ಅಮರೇಶಪ್ಪಗೌಡ ಮಲ್ಲದಗುಡ್ಡ ಭಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.