ಈಗ 'ತತ್ವಸಿದ್ಧಾಂತದಲ್ಲಿ ಮನಸ್ಸು' ಎಂಬುದನ್ನು ಯಥಾಶಕ್ತಿ ತಿಳಿಯಲು ಪ್ರಯತ್ನಿಸೋಣ.

'ಸ್ವಾತಂತ್ರ್ಯಣ ಸ್ಮರಣಸಾಧನಂ ಮನಃ ' ಸ್ವತಂತ್ರವಾಗಿ ಸ್ಮರಣೆಗೆ ಸಾಧನವಾದದ್ದೇ ಮನಸ್ಸು ಎಂಬುದಾಗಿ ಶ್ರೀಜಯತೀರ್ಥರು ಪ್ರಮಾಣಪದ್ಧತಿಯಲ್ಲಿ ಹೇಳಿದ್ದಾರೆ. ಇಂದ್ರಿಯಗಳು ವಿಷಯಗಳನ್ನು ಅನುಭವಿಸುತ್ತವೆ. ಅನುಭವಕ್ಕೆ ಬಂದ ವಿಷಯಗಳು ಮನಸ್ಸನ್ನು ಪ್ರವೇಶಿಸುತ್ತವೆ. ಅರ್ಥಂದ್ರಿಯ ಸನಿಕರ್ಷದ ಅನಂತರ ಮನಸ್ಸು ಬಾಹೇಂದ್ರಿಯಗಳ ಜೊತೆ ಸಕರ್ಷ ಹೊಂದುತ್ತದೆ. ಆಗ ಆ ಅನುಭವಿಸಿದ ಅರ್ಥಗಳು ಸಂಸ್ಕಾರ ರೂಪವಾಗಿ ಮನಸ್ಸಿನಲ್ಲಿ ರೂಪುಗೊಳ್ಳುತ್ತದೆ. ಭವಿಷ್ಯತ್ ಕಾಲದಲ್ಲಿ ಆ ಸಂಸ್ಕಾರದ ಸಹಾಯದಿಂದ ಮನಸ್ಸು ಸ್ವತಂತ್ರವಾಗಿ ಸ್ಮರಣೆಯನ್ನು ತಂದುಕೊಡುತ್ತದೆ. ಹೀಗೆ ಸಂಸ್ಕಾರ ಹುಟ್ಟಲು ಹಾಗೂ ಸಂಸ್ಕಾರ ಉಳಿಯಲು, ಮತ್ತು ಸಂಸ್ಕಾರದಿಂದ ಮುಂದೆ ಸ್ಮರಣೆ ಬರಲು ಯಾವುದು ಸಾಧನವೋ , ಅದೇ ಮನಸ್ಸು ಎಂಬುದು ಪ್ರಮಾಣಪದ್ಧತಿಯ ಅಭಿಪ್ರಾಯ.

ಅತ್ಯಂತ ಅಣುಸ್ವರೂಪವಾದ ' ಮನಸ್ಸು' ಜಡಭೂತವಾಗಿದೆ. ಅಹಂಕಾರತತ್ವ ಸ್ವರೂಪವಾದ ಮನಸ್ಸು ಅನಾದಿಕಾಲದಿಂದಲೂ ತೇಜೋಮಯವಾಗಿದ್ದರೂ ಕೂಡ ಜೀವನ ಜೊತೆ ಅಂಟಿಕೊಂಡು ಬಂದಿರುತ್ತದೆ. ಲಿಂಗದೇಹ ಭಂಗವಾಗುವ ತನಕ ಇದರ ಅಸ್ತಿತ್ವ. ಅನಂತರ ಜೀವನಿಗೂ ಮನಸ್ಸಿಗೂ ಯಾವುದೇ ಸಂಬಂಧ ವಿರುವುದಿಲ್ಲ. ಐದು ಕರ್ಮೇಂದ್ರಿಯ, ಐದು ಜ್ಞಾನೇಂದ್ರಿಯಗಳೆಂಬ ಹತ್ತು ಮಕ್ಕಳನ್ನು ಈ ಮನಸ್ಸು ಹೊಂದಿರುತ್ತದೆ. ಇವೆಲ್ಲದರ ಜವಾಬ್ದಾರಿ ಅನಾದಿಕಾಲದಿಂದ ಪ್ರತಿಶರೀರದಲ್ಲಿಯೂ ಇದ್ದೇ ಇರುತ್ತದೆ. ಯಾರೇ ಒಬ್ಬ ಮನುಷ್ಯನು ಮರಣವನ್ನು ಹೊಂದಿದರೆ ದೇಹ ನಾಶವಾಗುತ್ತದೆ ಹೊರತು, ಮನಸ್ಸಾಗಲೀ, ಕರ್ಮೇಂದ್ರಿಯ ಜ್ಞಾನೇಂದ್ರಿಯಗಳಾಗಲೀ ನಾಶವನ್ನು ಹೊಂದುವುದಿಲ್ಲ. ವಿವಿಧ ಪ್ರಾಣಿಗಳ ಶರೀರದಲ್ಲಿ, ವೃಕ್ಷಾದಿಗಳ ಶರೀರದಲ್ಲಿ, ಮನುಷ್ಯಾದಿ ಶರೀರಗಳಲ್ಲಿ ಈ ಇಂದ್ರಿಯಗಳೆಲ್ಲವೂ ವ್ಯತ್ಯಾಸವಾಗದೇ ಬರುತ್ತಿರುತ್ತವೆ. ಆದ್ದರಿಂದಲೇ ಜನ್ಮಾಂತರದ ಸಂಸ್ಕಾರವನ್ನು ಪ್ರತಿಯೊಬ್ಬರೂ ಹೊಂದಿಯೇ ಇರುತ್ತಾರೆ.

– ಶ್ರೀಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠದ ಸ್ವಾಮೀಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.