ಭಾನುವಾರ, ಮೇ 16, 2021
23 °C

ಮಸ್ಕಿ | ‘ಮಂಗ್ಲಿ’ ಕನ್ನಡ ಹಾಡು: ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ (ರಾಯಚೂರು): ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರಕ್ಕೆ ಬಂದಿರುವ ತೆಲುಗು ಹಿನ್ನೆಲೆ ಗಾಯಕಿ ಮಂಗ್ಲಿ (ಸತ್ಯವತಿ) ಅಡವಿಬಾವಿ ತಾಂಡಾದಲ್ಲಿ ‘ಕಣ್ಣ ಹೊಡಿಯಾಕ್..’ ಹಾಡು ಹಾಡಿ‌ ರಂಜಿಸಿದರು.

‘ಕನ್ನಡ ಸ್ವಲ್ಪ ಮಾತನಾಡಲು ಬರತ್ತೆ’ ಎಂದರು.

‘ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಕನ್ನಡದಲ್ಲಿ ಹೇಳಿದ್ದಕ್ಕೆ ಯುವಕರು ಶಿಳ್ಳೆ ಹೊಡೆದರು. ಕಲಬುರ್ಗಿ ಸಂಸದ ಉಮೇಶ ಜಾಧವ ವೇದಿಕೆಯಲ್ಲಿದ್ದರು.

ಇದನ್ನೂ ಓದಿ... ಡಿಕೆಶಿ ಸಾಗುತ್ತಿರುವ ಹಡಗಿಗೆ ಸಿದ್ದರಾಮಯ್ಯ ರಂಧ್ರ ಕೊರೆಯುತ್ತಿದ್ದಾರೆ: ಬಿಜೆಪಿ

‘ಮಂಗ್ಲಿ’ ವಿಡಿಯೋ ಸೆರೆಹಿಡಿಯಲು ಪೈಪೋಟಿ
ಮಸ್ಕಿ (ರಾಯಚೂರು):
ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿರುವ ತೆಲುಗು ಚಲನಚಿತ್ರ ಹಿನ್ನೆಲೆ ಗಾಯಕಿ ಅಡವಿಭಾವಿ ತಾಂಡಾದಲ್ಲಿ ಮತಯಾಚಿಸಿದರು.

ಕಿಕ್ಕಿರುದು ನೆರೆದಿದ್ದ ಯುವಜನರು ಹಾಡು ಹಾಡಲು ಒತ್ತಾಯಿಸಿದರು. 'ಕಣ್ಣೆ ಅದಿರಿಂದಿ..' ಎಂದು‌ ತೆಲುಗು ಭಾಷೆಯಲ್ಲಿ ಮಂಗ್ಲಿ ಹಾಡಿದರು. ಆನಂತರ ಕನ್ನಡದಲ್ಲಿ 'ಕಣ್ಣು ಹೊಡೆಯಾಕ್...' ಹಾಡು ಹಾಡಿದರು.

ನೆರೆದಿದ್ದ ಜನರೆಲ್ಲರ ಕೈಯಲ್ಲಿ ಮೊಬೈಲ್ ತೆರೆದುಕೊಂಡಿತ್ತು. ಎಲ್ಲರೂ ವಿಡಿಯೋ ಗ್ರಾಫರ್‌ಗಳಾಗಿದ್ದರು.

ಮೊಬೈಲ್ ನಲ್ಲಿ ವಿಡಿಯೋ‌ ಸೆರೆಹಿಡಿದು ಮತ್ತೆ ಮತ್ತೆ ನೋಡಿಕೊಳ್ಳಲು ಕಾತರರಾಗಿದ್ದರು. ಹಾಡಿಗೆ ಹೆಜ್ಜೆ ಹಾಕಿ ಮೋಜು ಅನುಭವಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು