ಮಂಗಳವಾರ, ಮೇ 18, 2021
29 °C

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪಿಪಿಇ ಕಿಟ್‌ ಧರಿಸಿ ಮತಚಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ (ರಾಯಚೂರು): ಕೋವಿಡ್‌ ಪಾಸಿಟಿವ್ ಕಾರಣ 'ಹೋಮ್‌ ಐಸೋಲೇಷನ್‌‘ ನಲ್ಲಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಕೋವಿಡ್‌ ಮಾರ್ಗಸೂಚಿ ಅನ್ವಯ ಪಿ‍ಪಿಇ ಕಿಟ್‌ ಧರಿಸಿ ಶನಿವಾರ ಸಂಜೆ 6.30ಕ್ಕೆ ಅವರ ಮನೆ ಹತ್ತಿರದ ಕಿಲ್ಲಾ ಮತಗಟ್ಟೆಗೆ ಬಂದು ತಮ್ಮ ಮತ ಚಲಾಯಿಸಿದರು.

ಸಂಜೆ 6 ರಿಂದ 7 ಗಂಟೆ ವರೆಗೆ ಕೋವಿಡ್‌ ಪಾಸಿಟಿವ್ ಇದ್ದವರಿಗೆ ಮತ ಚಲಾಯಿಸಲು ಪ್ರತ್ಯೇಕ ಸಮಯ ಗೊತ್ತು ಮಾಡಲಾಗಿತ್ತು. ಈ ಸಮಯದಲ್ಲಿಯೇ ಅವರು ಬಂದು ಮತ ಚಲಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು