ಭಾನುವಾರ, ಮೇ 16, 2021
29 °C

ದೇವಾಲಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುದಗಲ್: ಮಸ್ಕಿ ಉಪ ಚುನಾವಣೆಯ ಪ್ರಚಾರ ಸಭೆಗೆ ತೆರಳುವ ಮುಂಚೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ರಾಘವೇಂದ್ರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.

ಪಟ್ಟಣದ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಬೆಳಿಗ್ಗೆ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಸಮಿತಿ ಸದಸ್ಯರು ಗೌರವಿಸಿದರು. ರಾಘವೇಂದ್ರ ಮಠದಲ್ಲಿ ಶ್ರೀಮಠದ ಅರ್ಚಕರು ಮುಖ್ಯಮಂತ್ರಿ ಅವರಿಗೆ ಆಶೀರ್ವಾದಿಸಿ, ಮಂತ್ರಾಕ್ಷತೆ ನೀಡಿದರು.

ಸಚಿವ ಭೈರತಿ ಬಸವರಾಜ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ಡಿ.ವಜ್ಜಲ, ಶಾಸಕರಾದ ದೊಡ್ಡನಗೌಡ ಪಾಟೀಲ, ರಾಜುಗೌಡ, ವಿಪ್ರ ಸಮಾಜದ ಅರ್ಚಕರಾದ ಮದ್ವಾಚಾರ್ಯ, ವಿ.ಎಸ್. ಶೆಡ್ಲಿಗೇರಿ, ಗುರುರಾಜ ದೇಶಪಾಂಡೆ, ಆರ್.ವಿ. ಗುಮಾಸ್ತೆ, ಕೆ.ವೆಂಕಟೇಶ, ಹನುಮೇಶ ಪಟವಾರಿ, ಗುರುರಾಜ ದೇಶಪಾಂಡೆ, ಗುರುಬಸಪ್ಪ ಸಜ್ಜನ, ವಿಶ್ವನಾಥ ದೇಸಾಯಿ, ಶಿವಾನಂದ ಸುಂಕದ, ಚಂದ್ರಶೇಖರ ಗಂಗಾವತಿ, ಅನಿಲ ಕುಮಾರ ಬುಶೆಟ್ಟಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು