ಗುರುವಾರ , ಮೇ 6, 2021
23 °C

ಬಸನಗೌಡ ಪರ ಯು.ಟಿ.ಖಾದರ್ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರ್ವಿಹಾಳ: ‘ಪ್ರತಾಪಗೌಡ ಪಾಟೀಲ ಅವರು ತನ್ನ ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಅಲ್ಲ‘ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ತುರ್ವಿಹಾಳ ಪಟ್ಟಣ ಸೇರಿದಂತೆ ಗುಂಜಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಪರ ಚುನಾವಣೆ ಪ್ರಚಾರ ಮಾಡಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷದಿಂದ ಎರಡು ಬಾರಿ ಶಾಸಕರಾದ ಪ್ರತಾಪಗೌಡ ಪಾಟೀಲರು, ಜನರ ಆಶಯಕ್ಕೆ ವಿರುದ್ಧವಾಗಿ ನಿರ್ಣಯ ತೆಗೆದುಕೊಂಡಿರುವ ಕಾರಣಕ್ಕಾಗಿ, ಇಂದು ಉಪ ಚುನಾವಣೆ ಎದುರಾಗಿದೆ. ಇದರಿಂದ ಸರ್ಕಾರದ ಹಣ ವ್ಯಯವಾಗಿ ಸಾರ್ವಜನಿಕರ ಜೀವನದ ಮೇಲೆ ಬರೆ ಬೀಳುತ್ತದೆ. ಇಂಥವರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾದರೆ, ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಮತ ನೀಡಬೇಕು ಎಂದು ಹೇಳಿದರು.

ಕಾಂಗ್ರೇಸ್ ಮುಖಂಡರಾದ ಪಾರೂಖ್ ಸಾಬ್, ಮಲ್ಲನಗೌಡ ದೇವರಮನಿ, ಸಿರಾಜ್ ಪಾಷಾ ದಳಪತಿ, ಎಚ್.ಎನ್. ಬಡಿಗೇರ್, ಅಬೂತುರಾಬ್, ಮುತ್ತಣ್ಣ ನವಲಿ, ಶಿವಪುತ್ರಪ್ಪ ಕೆಂಗೇರಿ, ಬಾಪೂಗೌಡ ದೇವರಮನಿ, ಕರಿಯಪ್ಪ ಟೇಲರ್, ಗೂಳಪ್ಪ ಕುಂಟೋಜಿ, ಶ್ಯಾಮೀದ್ ಸಾಬ್, ಶ್ಯಾಮೀದ್ ಸಾಬ್ ಅರಬ್, ಶಂಕ್ರಗೌಡ ದೇವರಮನಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು