ಶನಿವಾರ, ಜೂನ್ 25, 2022
24 °C

ಕೆಲಸ ಮಾಡದ ಶಾಸಕ: ಜೆಡಿಎಸ್ ರಾಜ್ಯ ಮುಖಂಡ ಸಿದ್ದು.ವೈ.ಬಂಡಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುದಗಲ್: ‘ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ ಹೆಸರಿಗಷ್ಟೇ ಶಾಸಕ’ ಎಂದು ಜೆಡಿಎಸ್ ರಾಜ್ಯ ಮುಖಂಡ ಸಿದ್ದು.ವೈ.ಬಂಡಿ ಆರೋಪಿಸಿದರು.

ಪಟ್ಟಣದ ಮೇಗಳಪೇಟೆಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಸಕ ಹೂಲಗೇರಿ ಅವರು ಗ್ರಾಮೀಣ ಭಾಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಮುದಗಲ್ ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಪಟ್ಟಣದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಇದ್ದರೂ 8 ದಿನಕ್ಕೊಮ್ಮೆ, 2 ಗಂಟೆ ಮಾತ್ರ ನೀರು ಬಿಡುತ್ತಾರೆ. ಪುರಸಭೆ ಸದಸ್ಯರು ಶಾಸಕರ ಕೈಗೊಂಬೆಯಾಗಿದ್ದಾರೆ. ಕ್ಷೇತ್ರದಲ್ಲಿ ಶಾಸಕರ ಕಾರ್ಯ ಶೂನ್ಯ ಎಂದು ದೂರಿದರು.

ಜೆಡಿಎಸ್ ಮುದಗಲ್ ಘಟಕದ ಅಧ್ಯಕ್ಷ ಅಮೀರ್ ಬೇಗ ಉಸ್ತಾದ, ಪುರಸಭೆ ಸದಸ್ಯರಾದ ಕರಿಯಪ್ಪ ಯಾದವ, ಮೈಹಿಬೂಬಸಾಬ ಕಡ್ಡಿಪುಡಿ, ನಾಗರಾಜ ತಳವಾರ, ತಾಲ್ಲೂಕು ಕಾರ್ಯದರ್ಶಿ ವಿರೇಶ, ಅರುಣ ಕುಮಾರ ಯರದಿಹಾಳ, ಯುವ ಘಟಕ ಅಧ್ಯಕ್ಷ ಅನ್ವರ ಮೀಯಾ ಕಂದಗಲ್ ಹಾಗೂ ಉಪಾಧ್ಯಕ್ಷ ರಹೀಮಾನಸಾಬ ಅರಂಜಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.