ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಗಾರು ಹಬ್ಬ: ಪೂರ್ವಭಾವಿ ಸಭೆ

Published 26 ಮೇ 2024, 14:28 IST
Last Updated 26 ಮೇ 2024, 14:28 IST
ಅಕ್ಷರ ಗಾತ್ರ

ರಾಯಚೂರು: ‘ಜಾನಪದ, ಗ್ರಾಮೀಣ ಸೊಗಡಿನ ಮುಂಗಾರು ಸಾಂಸ್ಕೃತಿಕ  ಹಬ್ಬವನ್ನು ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಸಮಾಜದ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು. 

ನಗರದ  ಲಕ್ಷ್ಮಮ್ಮದೇವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಕಾರ ಹುಣ್ಣಿಮೆಯ ಪ್ರಯುಕ್ತ ನಡೆಯುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಈ ಬಾರಿ ಬರುವ ಜೂನ್ 21ರಿಂದ  23 ರವರೆಗೆ ಆಯೋಜಿಸಲಾಗಿದೆ. 23 ವರ್ಷಗಳಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ನಾಡ ಹಬ್ಬವನ್ನು ಅತ್ಯಂತ ವೈಭವದಿಂದ ನಡೆಸಲಾಗುತ್ತಿದೆ’ ಎಂದರು.

‘ಮುನ್ನೂರು ಕಾಪು ಸಮಾಜ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇತರೆ ಸಮಾಜಕ್ಕೆ ಮಾದರಿಯಾಗಿದೆ. ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಮುನ್ನೂರು ಕಾಪು ಸಮಾಜ ಬಲಿಷ್ಠವಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕವಾಗಿ ಸದೃಢವಾಗಬೇಕು. ಈ ನಿಟ್ಟಿನಲ್ಲಿ ಸಮಾಜ ಒಗ್ಗಟ್ಟು ಪ್ರದರ್ಶನ ಅಗತ್ಯ’ ಎಂದು ಹೇಳಿದರು. 

ಸಭೆಯಲ್ಲಿ ಸಮಾಜದ ಮುಖಂಡರು ಪಾಲ್ಗೊಂಡು ಸಲಹೆ–ಸೂಚನೆ ನೀಡಿದರು. ಬೆಲ್ಲಂ ನರಸರೆಡ್ಡಿ, ಗಿ.ಕೃಷ್ಣಮೂರ್ತಿ, ಉ.ಬಸವರಾಜ ರೆಡ್ಡಿ, ರಾಳ ತಿಮ್ಮರೆಡ್ಡಿ, ಕುಕ್ಕಲ ದೊಡ್ಡ ನರಸಿಂಹಲು, ಬಂಗಿ ನರಸರೆಡ್ಡಿ, ಸುಗಣ್ಣಗಾರ ವೆಂಕಟರೆಡ್ಡಿ, ಬುಡತಪ್ಪಗಾರು ಆಂಜನೇಯ ಹಾಗೂ ಜಿ.ಶೇಖರರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT