ಮುದಗಲ್: ‘ಮೊಹರಂ ಆರಂಭವಾಗಿದೆ. ಪಟ್ಟಣದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ಲಿಂಗಸುಗೂರು ಉಪ ವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ ಹೇಳಿದರು.

ಪಟ್ಟಣದ ಭಾರತ್ ಫಂಕ್ಷನ್ ಹಾಲ್ನಲ್ಲಿ ಸೋಮವಾರ ನಡೆದ ಮೊಹರಂ ಶಾಂತಿಸಭೆಯಲ್ಲಿ ಮಾತನಾಡಿ,‘ಪುರಸಭೆಯಿಂದ ಸ್ವಚ್ಛತೆ, ಕುಡಿಯುವ ನೀರು, ದೀಪಗಳ ಅಳವಡಿಕೆ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಬೇಕು. ಭಕ್ತರಿಗೆ ತೊಂದರೆಯಾಗದಂತೆ ಮತ್ತು ಅಹಿತಕರ ಘಟನೆ ಜರುಗದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕು. ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಿ ಮೊಹರಂ ಯಶಸ್ಸಿಗೆ ಕೈಜೋಡಿಸಬೇಕು’ ಎಂದರು.

ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಮಾತನಾಡಿ,‘ದೇವರ ಮೆರವಣಿಗೆ ನಡೆಯುವ ಮಸೀದಿಗಳ ಮುಂಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತೇವೆ. ಸೂಕ್ತ ಬಂದೋಬಸ್ತ್ ಕಲ್ಪಿಸುತ್ತೇವೆ. ವಾಹನ ದಟ್ಟಣೆ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದರು.

‘ಭಕ್ತರಿಗೆ ಎಟಿಎಂ ವ್ಯವಸ್ಥೆ ಮಾಡಬೇಕು. ಅಹಿತಕರ ಘಟನೆ ಜರುಗದಂತೆ ಗಸ್ತು ತಿರುಗಬೇಕು. ಮಸೀದಿ ಮುಂಭಾಗದಲ್ಲಿ ದೀರ್ಘದಂಡ ನಮಸ್ಕಾರ ಹಾಕಿದವರಿಗೆ ಸ್ನಾನ ಗೃಹ ನಿರ್ಮಾಣ ಮಾಡಬೇಕು. ಹೆಚ್ಚಿನ ಬಸ್ಗಳ ಸೌಲಭ್ಯ ಕಲ್ಪಿಸಬೇಕು. ಆಲಂಗಳ ಸವಾರಿಯಂದು ಕೋಟೆ ಮುಂಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಬೇಕು. ಮದ್ಯ ಮಾರಾಟ ನಿಷೇಧ ಮಾಡಬೇಕು’ ಎಂದು ಮುಖಂಡರಾದ ಗುರುಬಸ್ಸಪ್ಪ ಸಜ್ಜನ್, ರಾಘವೇಂದ್ರ ಗುಮಾಸ್ತೆ, ಸಾದೀಕ್ ಅಲಿ, ಮೌಲಾನಾ ಜಮೀರ್ ಅಹ್ಮದ್ ಖಾಜಿ ಸಾಬ್, ಎಸ್.ಎ.ನಯೀಮ್, ವೆಂಕಟೇಶ ಹಿರೇಮನಿ, ಬಸವರಾಜ ಬಂಕದಮನಿ, ಶರಣಪ್ಪ ಕಟ್ಟಿಮನಿ, ಸಣ್ಣ ಸಿದ್ದಯ್ಯ, ರಫಿ ಮೌಲಾನಾ ಹಾಗೂ ಖದೀರ್ ಆಗ್ರಹಿಸಿದರು.

ತಹಶೀಲ್ದಾರ್ ಸತ್ಯಮ್ಮ, ಮಸ್ಕಿ ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್ಐ ವೆಂಕಟೇಶ ಮಾಡಗೇರಿ, ಅನಂತಕುಮಾರ, ಪುರಸಭೆ ಮುಖ್ಯಾಧಿಕಾರಿ ಪ್ರವೀಣ, ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಹುಸೇನಿ ಆಲಂ ದರ್ಗಾ ಸಮಿತಿ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ತಮ್ಮಣ್ಣ ಗುತ್ತೇದಾರ, ಸಂಗಪ್ಪ ಹಿರೇಮನಿ, ಸೈಯದ್ಸಾಬ್, ನ್ಯಾಮತ್ ಖಾದ್ರಿ, ಚಂದ್ರಶೇಖರ ನಾಯಕ್, ಎಸ್.ಎನ್.ಖಾದ್ರಿ, ಸಾಬು ಹುಸೇನ್, ಜೆಸ್ಕಾಂ ಇಲಾಖೆ ಅಧಿಕಾರಿಗಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.